ADVERTISEMENT

ಹೋಳಿ ಸಂಭ್ರಮದ ನಡುವೆ ಇರಲಿ ಚರ್ಮ ಹಾಗೂ ಕೂದಲ ಕಾಳಜಿ- ಜುಶ್ಯಾ ಭಾಟಿಯಾ ಲೇಖನ

ಡಾ.ಜುಶ್ಯಾ ಭಾಟಿಯಾ
Published 17 ಮಾರ್ಚ್ 2022, 13:15 IST
Last Updated 17 ಮಾರ್ಚ್ 2022, 13:15 IST
ಹೋಳಿ ಸಂಭ್ರಮದಲ್ಲಿ ಯುವತಿ
ಹೋಳಿ ಸಂಭ್ರಮದಲ್ಲಿ ಯುವತಿ   

ನಾಳೆ ಹೋಳಿ ಹಬ್ಬ. ಬಣ್ಣಗಳ ಹಬ್ಬ ಹೋಳಿ ಎಂದರೆ ಸಂಭ್ರಮ. ಬಣ್ಣಗಳನ್ನು ಎರಚಾಡುತ್ತಾ ಸಂಭ್ರಮಿಸುವ ಈ ಹಬ್ಬದಲ್ಲಿ ಚರ್ಮ ಮತ್ತು ಕೂದಲಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಬಣ್ಣಗಳಲ್ಲಿನ ರಾಸಾಯನಿಕ ಅಂಶಗಳು ಚರ್ಮ ಹಾಗೂ ಕೂದಲಿಗೆ ಹಾನಿಯುಂಟು ಮಾಡುತ್ತವೆ. ಹಾಗಾದರೆ ಸಂಭ್ರಮದ ನಡುವೆಯೂ ಚರ್ಮ ಹಾಗೂ ಕೂದಲಿನ ಕಾಳಜಿ ಮಾಡುವುದು ಹೇಗೆ. ಇಲ್ಲಿದೆ ವಿವರ..

* ಹಬ್ಬದ ಖುಷಿಯ ಜೊತೆಗೆ ನಿಮ್ಮ ತ್ವಚೆಗೆ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ, ಆಗಾಗ್ಗೆ ನೀರು ಕುಡಿಯಲು ಮರೆಯಬೇಡಿ.

* ಹೊರಹೋಗುವ ಕನಿಷ್ಠ 30 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಲೋಷನ್ ಹಚ್ಚಿ ಮತ್ತು ಪ್ರತಿ 2-3 ಗಂಟೆಗಳ ನಂತರ ಅಥವಾ ಪ್ರತಿ ಬಾರಿ ನೀವು ನೀರಿಗೆ ತ್ವಚೆಯನ್ನು ಒಡ್ಡಿಕೊಂಡ ನಂತರ ಮತ್ತೆ ಹಚ್ಚಿ.

ADVERTISEMENT

* ತೆರೆದಿರುವ ದೇಹದ ಭಾಗಗಳಾದ ಕಿವಿ, ಕುತ್ತಿಗೆ, ಕೈ, ತೋಳುಗಳು, ಪಾದಗಳಿಗೆ ತೆಂಗಿನಎಣ್ಣೆ ಸವರಿ. ಎಣ್ಣೆಯು ಚರ್ಮ ಬಣ್ಣಗಳನ್ನು ಹೀರಿಕೊಳ್ಳುವುದನ್ನು ತಡೆಯಲು ಮುಚ್ಚುವ ತಡೆಗೋಡೆ ನಿರ್ಮಾಣ ಮಾಡುತ್ತದೆ. ಇದು ಬಣ್ಣಗಳನ್ನು ಸುಲಭವಾಗಿ ತೊಳೆದು ತೆಗೆದು ಹಾಕಲು ಸಹಕರಿಸುತ್ತದೆ.

* ಬಿಸಿಲಿನಲ್ಲಿ ಆಡುವಾಗ ಯುವಿ ಕಿರಣಗಳಿಂದ ರಕ್ಷಣೆ ಪಡೆಯಲು ಸನ್ ಗ್ಲಾಸ್ ಧರಿಸಿ.

* ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಲು ಮರೆಯದಿರಿ. ಬಿಗಿಯಾದ ಉಡುಪುಗಳು ಚರ್ಮದ ಮೇಲೆ ಬಣ್ಣಗಳನ್ನು ಕಾಂಪ್ಯಾಕ್ಟ್ ಮಾಡಲು ಕಾರಣವಾಗುತ್ತದೆ, ಚರ್ಮದ ಸೂಕ್ಷ್ಮತೆ ಮತ್ತು ಅಲರ್ಜಿಯನ್ನು ಉಂಟುಮಾಡುತ್ತದೆ.

* ಚರ್ಮದ ಮೇಲಿನ ಬಣ್ಣವನ್ನು ಸ್ವಚ್ಛ ಮಾಡಲು ಸೋಪ್‌ ಬಳಸುವುದರಿಂದ ತ್ವಚೆಯಲ್ಲಿ ತುರಿಕೆ ಮತ್ತು ಕಿರಿಕಿರಿ ಉಂಟಾಗಬಹುದು. ಹೋಳಿ ನಂತರದ ಬಣ್ಣವನ್ನು ಶುಚಿಗೊಳಿಸಲು ಮೃದುವಾದ ಬಾಡಿ ವಾಶ್ ಅಥವಾ ಸಿಂಡೆಟ್ ಬಾರ್ ಉತ್ತಮ ಆಯ್ಕೆ.

* ಬಣ್ಣ ತೆಗೆಯಲು ತೆಂಗಿನೆಣ್ಣೆಯನ್ನು ಬಳಸುವುದರಿಂದ ತ್ವಚೆಯಲ್ಲಿ ನೀರಿನ ಧಾರಣಶಕ್ತಿ ಉತ್ತೇಜನಗೊಳ್ಳುತ್ತದೆ. ನೀವು ಮೇಕ್ಅಪ್ ಹಾಕಿಕೊಂಡಿದ್ದರೆ, ದಿನದ ಅಂತ್ಯದ ವೇಳೆಗೆ ಕ್ಲೀನಿಂಗ್ ಬಾಲ್ ಅಥವಾ ಎಣ್ಣೆಯಿಂದ ಮೇಕ್‌ಅಪ್‌ ಅನ್ನು ಸಂಪೂರ್ಣ ಸ್ವಚ್ಛಗೊಳಿಸಿ. ಒಣ ತ್ವಚೆಯಿರುವವರು ಮೇಕಪ್ ತೆಗೆಯಲು ಮತ್ತು ಚರ್ಮದ ತೇವವನ್ನು ಹೆಚ್ಚಿಸಲು ಹತ್ತಿ ಉಂಡೆಗಳಲ್ಲಿ ಅದ್ದಿದ ತೆಂಗಿನಎಣ್ಣೆಯನ್ನು ಬಳಸಬಹುದು.

* ಕೂದಲಿಗೆ ಬಣ್ಣ ಅಂಟದಂತೆ ಮಾಡಲು ಕೂದಲಿಗೆ ತೆಂಗಿನಎಣ್ಣೆಯನ್ನು ಹಚ್ಚಿ. ಈ ಎಣ್ಣೆ ಕೂದಲಿನ ಎಳೆಗಳಲ್ಲಿ ಆಳವಾದ ಪದರಗಳನ್ನು ನಿರ್ಮಿಸಿ ಕಾರ್ಟೆಕ್ಸ್‌ಗೆ ತಲುಪುವುದರಿಂದ, ಒಳಗಿನಿಂದ ಕೂದಲಿಗೆ ಹಾನಿಯಾಗಲು ಬಿಡುವುದಿಲ್ಲ. ಬಣ್ಣದ ನೀರಿನಿಲ್ಲಿ ಆಟವಾಡಲು ಹೊರಬರುವಾಗ ಅವುಗಳನ್ನು ಟೋಪಿಯಿಂದ ಮುಚ್ಚಿ ಅಥವಾ ಕೂದಲು ಗಾಳಿಗೆ ಹಾರದಂತೆ ಬ್ಯಾಂಡ್ ಬಳಸಿ.

* ಕೂದಲಿನ ಎಳೆಗಳನ್ನು ಒಣಗಿಸದೆ ನೆತ್ತಿಯನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಸಲ್ಫೇಟ್-ಮುಕ್ತ ಶಾಂಪೂ ಬಳಸಿ. ಶಾಂಪೂ ಮಾಡಿದ ನಂತರ ಕಂಡೀಷನರ್ ಅಥವಾ ಹೇರ್ ಮಾಸ್ಕ್ ಬಳಸಿ. ಕೂದಲಿನ ಎಳೆಗಳಿಗೆ ತೆಂಗಿನಎಣ್ಣೆಯನ್ನು ಲೇಪಿಸುವುದರಿಂದ ತೇವಾಂಶ ಉಳಿಯುತ್ತದೆ. ಹಾನಿಗೊಳಗಾದ ಕೂದಲಿನ ಹೊರಪೊರೆಗಳನ್ನು ಸರಿಪಡಿಸುತ್ತದೆ. ತಲೆಕೂದಲಿಗೆ ಬಳಸುವ ಎಣ್ಣೆಯನ್ನು ತುಸು ಬೆಚ್ಚಗಾಗಿ ಬಳಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.

ಚರ್ಮ ಹಾಗೂ ತ್ವಚೆಯ ಅಂದ ಕೆಡುತ್ತದೆ ಎಂಬ ಕಾರಣಕ್ಕೆ ಹೋಳಿ ಆನಂದವನ್ನು ಸಂಭ್ರಮಿಸದೇ ಇರುವ ಬದಲು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ, ಹೋಳಿ ಆಡಿದ ನಂತರ ಸೂಕ್ತ ಕ್ರಮ ಅನುಸರಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.