ADVERTISEMENT

ಹದಿಹರೆಯದ ಹೆಣ್ಣುಮಕ್ಕಳ ಆಹಾರ ಪದ್ಧತಿ ಹೀಗಿದ್ದರೆ ಚೆನ್ನ ಎನ್ನುತ್ತಾರೆ ವೈದ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2026, 11:45 IST
Last Updated 29 ಜನವರಿ 2026, 11:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೆಣ್ಣಮಕ್ಕಳಲ್ಲಿ 10 ರಿಂದ 19 ವರ್ಷದವರೆಗೆ ಹಾರ್ಮೋನುಗಳ ಬದಲಾವಣೆಯಿಂದ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ಪೌಷ್ಟಿಕ ಆಹಾರ ಅಗತ್ಯವಾಗಿರುತ್ತದೆ. ಅಲ್ಲದೆ ಈ ವಯಸ್ಸಿನಲ್ಲಿ ಋತುಸ್ರಾವ ಆರಂಭವಾಗುವ ಕಾರಣ ರಕ್ತಸ್ರಾವ, ರಕ್ತಹೀನತೆ, ಅಧಿಕ ತೂಕ, ಬೊಜ್ಜು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. 

ಈ ಎಲ್ಲ ಸಮಸ್ಯೆಗಳಿಗೂ ಆಹಾರ, ಜೀನಶೈಲಿಯ ನಿರ್ವಹಣೆಯೇ ಪರಿಹಾರವಾಗಿದೆ. ಅಕ್ಕಿ, ಗೋಧಿ, ರಾಗಿ ಮತ್ತು ಜೋಳದಂತಹ ಸೇವನೆಯಿಂದ ದೇಹದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಬಹುದು.

ADVERTISEMENT

ಪ್ರೋಟೀನ್‌ ಯುಕ್ತ ಆಹಾರಗಳಾದ ದ್ವಿದಳ ಧಾನ್ಯಗಳು, ತರಕಾರಿ, ಒಣಬೀಜಗಳು, ಮೊಟ್ಟೆ ಮತ್ತು ಸೋಯಾ ಉತ್ಪನ್ನಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ ಒಳ್ಳೆಯದು.

ಮೂಳೆಗಳ ಉತ್ತಮ ಬೆಳವಣಿಗೆಗೆ ಹಾಲು, ಮೊಸರು ಮತ್ತು ಪನೀರ್‌ ಸೇವಿಸಬಹುದು. ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳಿಗಾಗಿ ಹಸಿರು ಎಲೆಗಳ ತರಕಾರಿಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಕರಗುವ ಫೈಬರ್‌ಗಾಗಿ ಹಣ್ಣುಗಳು ಮತ್ತು ಋತುಮಾನದ ಹಣ್ಣುಗಳ ಸೇವನೆ ದೇಹಕ್ಕೆ ಒಳಿತು.

ಮುಟ್ಟಿನ ದಿನಗಳಲ್ಲಿ ರಕ್ತಸ್ರಾವವಾಗುವ ಕಾರಣ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಕಾಡುವುದು ಹೆಚ್ಚು. ಹೀಗಾಗಿ ಅದನ್ನು ತಡೆಗಟ್ಟಲು ಕಬ್ಬಿಣದ ಅಂಶ ಆಹಾರ ಅಗತ್ಯವಾಗಿರುತ್ತದೆ. ಕಬ್ಬಿಣಾಂಶದ ಮೂಲಗಳಾದ ಪಾಲಕ್, ಮೆಂತ್ಯ, ಬಸಳೆ, ಸಬ್ಬಸಿಗೆ ಸೊಪ್ಪುಗಳು, ಬೆಲ್ಲ, ರಾಗಿ, ಹಾಲು, ಮೊಟ್ಟೆ, ಒಣದ್ರಾಕ್ಷಿ, ಅಂಜೂರ ಮತ್ತು ಖರ್ಜೂರ ಸೇವನೆ ಉತ್ತಮ.

ಇವುಗಳ ಜತೆಗೆ ಸಿ ಹೇರಳವಾಗಿರುವ ಹಣ್ಣುಗಳಾದ ಕಿತ್ತಳೆ, ಪೇರಳೆ, ಕಿವಿ, ಪಪ್ಪಾಯ, ಮಾವು, ದ್ರಾಕ್ಷಿ ಹಣ್ಣುಗಳ ಸೇವನೆ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡಬಲ್ಲದು.

ಹಾರ್ಮೋನುಗಳ ಬದಲಾವಣೆಯಿಂದ ದೇಹದಲ್ಲಾಗುವ ಏರುಪೇರುಗಳನ್ನು ನಿಯಂತ್ರಿಸಲು ದ್ರವ ಪದಾರ್ಥದ ಸೇವನೆ ಅಗತ್ಯವಾಗಿರುತ್ತದೆ. ಹೀಗಾಗಿ ಸಕ್ಕರೆ ಪಾನೀಯಗಳಿಗಿಂತ ನೀರು, ಮಜ್ಜಿಗೆ ಅಥವಾ ಹಣ್ಣಿನ ರಸವನ್ನು ಸೇವಿಸಿ. ದಿನದಲ್ಲಿ ಆಗಾಗ್ಗೆ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ದಿನಕ್ಕೆ 5 ಲೀಟರ್‌ ನೀರು ಸೇವನೆ ಅತ್ಯುತ್ತಮ. ಕನಿಷ್ಠ 3 ಲೀಟರ್‌ ನೀರು ಕುಡಿದರೆ ದೇಹವನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಬಹುದು.

(ಲೇಖಕರು: ಡಾ.ಸಂಧ್ಯಾ ಸಿಂಗ್‌, ಮುಖ್ಯ ಆಹಾರ ತಜ್ಞರು, ಅಪೊಲೊ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.