ADVERTISEMENT

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವಿಕೆ: ಅದರ ನಿವಾರಣೆಗೆ ಇಲ್ಲಿವೆ ಸರಳ ಮನೆಮದ್ದುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 12:54 IST
Last Updated 21 ನವೆಂಬರ್ 2025, 12:54 IST
   

ಚಳಿಗಾಲದಲ್ಲಿ ಬಹುತೇಕರಿಗೆ ಕಾಡುವ  ಸಮಸ್ಯೆ ಎಂದರೆ ಹಿಮ್ಮಡಿ ಒಡೆಯುವುದು.  ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳವ ಬಗ್ಗೆ ಮಾಹಿತಿ ಇಲ್ಲಿದೆ.

ಹಿಮ್ಮಡಿ ಒಡೆಯಲು ಕಾರಣವೇನು

ಕಾಲಿನ ಹಿಮ್ಮಡಿ ಶುಚಿಯಾಗಿ ಇಲ್ಲಿದಿದ್ದರೆ

ಕಳಪೆ ಗುಣಮಟ್ಟದ ಶೂ–ಚಪ್ಪಲಿಗಳ ಬಳಕೆ

ADVERTISEMENT

ಧೂಳಿಗೆ ಹೋಗಿ ಬಂದು ಕಾಲು ತೊಳೆಯದೆ ಇದ್ದರೆ

ಕಾಲಿನ ಚರ್ಮ ಒಣಗಿದರೆ

ಮಧುಮೇಹ ಇದ್ದರೆ

ಪಾದದ ಮೇಲೆ ಅಧಿಕ ಒತ್ತಡ ಉಂಟು ಮಾಡುವ ಚಟುವಟಿಕೆಗಳಿಂದ

ಕಡಿಮೆ ನೀರು ಕುಡಿಯುವುದರಿಂದ

ತುಂಬಾ ಹೊತ್ತು ನೀರಿನಲ್ಲಿ ನಿಲ್ಲುವುದರಿಂದ

ಅತಿಯಾದ ಬೊಜ್ಜಿನ ಸಮಸ್ಯೆಗೂ ಕಾಲಿನ ಹಿಮ್ಮಡಿ ಒಡೆಯುತ್ತದೆ.

ಇದರ ನಿವಾರಣೆಗೆ ಮನೆಮದ್ದುಗಳು

  • ಪ್ರತಿದಿನ ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ಬಿಸಿ ನೀರಿಗೆ ಉಪ್ಪು ಹಾಕಿ, ಕಾಲನ್ನು 5–10 ನಿಮಿಷಗಳ ಕಾಲ ಅದರ ಒಳಗೆ ಇಡುವುದರಿಂದ ಹಿಮ್ಮಡಿ ಒಡೆಯುವಿಕೆ ಸಮಸ್ಯೆ ಗುಣವಾಗುತ್ತದೆ.

  • ತೆಂಗಿನ ಎಣ್ಣೆ ಜತೆ ಅರಶಿಣ ಪುಡಿ ಮಿಶ್ರಣ ಮಾಡಿ ರಾತ್ರಿ ಹಚ್ಚಿ ಬೆಳಗ್ಗೆ ತೊಳೆದುಕೊಳ್ಳಬೇಕು. ಪ್ರತಿದಿನ ರಾತ್ರಿ  ಹೀಗೆ ಮಾಡುವುದರಿಂದ ಕ್ರಮೇಣ ಈ ಸಮಸ್ಯೆ ಕಡಿಮೆ ಆಗುತ್ತದೆ.

  • ವ್ಯಾಸಲಿನ್ ಬಳಕೆ ಕಡಿಮೆ ಮಾಡಬೇಕು. 

  • ಚಪ್ಪಲಿ, ಶೂಗಳನ್ನು ತೊಳೆದು ಬಳಸಬೇಕು

  • ದಿನಕ್ಕೆ 3–4 ಲೀ ನೀರು ಕುಡಿಬೇಕು

  • ಉಗುರು ಬೆಚ್ಚಗಿನ  ನೀರಿನಲ್ಲಿ ಕಾಲು ತೊಳೆದುಕೊಂಡು, ನಿಂಬೆ ಹಣ್ಣಿನ ಜತೆ ಉಪ್ಪು ಸೇರಿಸಿ ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಒಡೆಯುವಿಕೆ ನಿವಾರಣೆ ಆಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.