ADVERTISEMENT

ಚರ್ಮ ಸಹಿತ ಕೋಳಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಚಿಕನ್ ತರುವ ಮುನ್ನ ಇದನ್ನು ಓದಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 11:30 IST
Last Updated 29 ಡಿಸೆಂಬರ್ 2025, 11:30 IST
<div class="paragraphs"><p>ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಚಿಕನ್</p></div>

ಚಾಮರಾಜನಗರದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಚಿಕನ್

   

ಕೆಲವರು ಚರ್ಮ ಸಹಿತ ಕೋಳಿ ಮಾಂಸವನ್ನು ಇಷ್ಟಪಟ್ಟರೆ, ಇನ್ನೂ ಕೆಲವರು ಚರ್ಮರಹಿತ ಕೋಳಿ ಮಾಂಸವನ್ನು ಸೇವಿಸುತ್ತಾರೆ. ಹಾಗಿದ್ದರೆ, ಚರ್ಮ ಸಹಿತ ಚಿಕನ್ ಸೇವನೆ ಆರೋಗ್ಯದ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ.

ಪೌಷ್ಟಿಕಾಂಶದ ದೃಷ್ಟಿಯಿಂದ ಗಮನಿಸುವುದಾದರೆ, ಚಿಕನ್ ಚರ್ಮವು ಕೊಬ್ಬು ಮತ್ತು ಕ್ಯಾಲೋರಿಗಳಿಂದ ಸಮೃದ್ಧವಾಗಿರುತ್ತದೆ. ಚರ್ಮವಿಲ್ಲದ ಕೋಳಿ ಮಾಂಸಕ್ಕೆ ಹೋಲಿಸಿದರೆ, ಚರ್ಮವಿರುವ ಕೋಳಿ ಮಾಂಸ ಎರಡು ಪಟ್ಟು ಹೆಚ್ಚು ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಈ ಕೊಬ್ಬು ಆರೋಗ್ಯಕರವಾದ ಕೊಬ್ಬು ಎಂದು ಪರಿಗಣಿಸಲಾಗಿದೆ.

ADVERTISEMENT

ಚರ್ಮ ಇರುವ ಕೋಳಿ ಮಾಂಸ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಮಾಂಸವನ್ನು ತಾಜಾವಾಗಿರಿಸುತ್ತದೆ. ಚರ್ಮದಲ್ಲಿ ಕೊಲಾಜೆನ್ ಮತ್ತು ಪ್ರೋಟೀನ್ ಇದ್ದು, ಇದು ನಮ್ಮ ಚರ್ಮದ ಆರೋಗ್ಯಕ್ಕೆ ಸಹಾಯಕವಾಗಿದೆ. ಅಲ್ಲದೇ ಕೋಳಿಯ ಚರ್ಮದಲ್ಲಿ ವಿಟಮಿನ್ ಎ ಮತ್ತು ಬಿಗಳು ಸಮೃದ್ಧವಾಗಿರುತ್ತವೆ.

ಚರ್ಮ ಸಹಿತ ಕೋಳಿ ಮಾಂಸದ ಅನಾನುಕೂಲತೆಗಳು:

ಕೋಳಿಯ ಚರ್ಮದಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ತೂಕ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಹೆಚ್ಚುವರಿ ಕ್ಯಾಲೋರಿಯ ಸಮಸ್ಯೆ ಉಂಟಾಗಬಹುದು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರುವವರು ‌ ಚರ್ಮ ಸಹಿತ ಕೋಳಿ ಮಾಂಸ ಸೇವನೆ ಕಡಿಮೆ ಮಾಡಿ.

ಆರೋಗ್ಯಕರ ಸೇವನೆ ಹೇಗೆ?

ಕೋಳಿ ಮಾಂಸವನ್ನು ಆವಿಯಲ್ಲಿ ಬೇಯಿಸುವುದು ಉತ್ತಮ ಅಡುಗೆ ವಿಧಾನವಾಗಿದೆ. ಹುರಿಯುವುದನ್ನು ತಪ್ಪಿಸಬೇಕು. ಏಕೆಂದರೆ ಅದು ಹೆಚ್ಚುವರಿ ಕೊಬ್ಬನ್ನು ಬಿಡುಗಡೆ ಮಾಡುತ್ತದೆ. ಮಾಂಸವನ್ನು ಬೇಯಿಸುವಾಗ ಚರ್ಮವಿರುವುದು ಒಳ್ಳೆಯದು. ಆದರೆ ತಿನ್ನುವ ಮುನ್ನ ಚರ್ಮವನ್ನು ತೆಗೆದು ಹಾಕುವುದು ಬುದ್ಧಿವಂತಿಕೆಯ ತಂತ್ರ. ಇದರಿಂದಾಗಿ ಮಾಂಸ ರುಚಿಕರವಾಗಿರುವುದರ ಜೊತೆಗೆ ಹೆಚ್ಚುವರಿ ಕೊಬ್ಬಿನ ಸೇವನೆ ತಪ್ಪಿಸಬಹುದು.

ಆರೋಗ್ಯವಂತ ವ್ಯಕ್ತಿಗಳು ಮಿತವಾಗಿ ವಿತ್ ಸ್ಕಿನ್ ಚಿಕನ್ ತಿನ್ನಬಹುದು. ಆದರೆ ಮಧುಮೇಹ, ಹೃದಯ ಸಮಸ್ಯೆ ಅಥವಾ ಅಧಿಕ ತೂಕ ಹೊಂದಿರುವವರು ಚರ್ಮವಿಲ್ಲದ ಕೋಳಿ ಮಾಂಸದ ಸೇವನೆ ಉತ್ತಮ.

ನಾಟಿ ಕೋಳಿ ಚರ್ಮ ಉತ್ತಮ

ನಾಟಿ ಕೋಳಿ ತಿನ್ನುವವರು ಚರ್ಮವನ್ನು ಸೇವಿಸಬಹುದು. ಬೈಲರ್‌ ಅಥವಾ ಫಾರ್ಮ್‌ ಕೋಳಿಗೆ ಹೋಲಿಸಿದರೆ ನಾಟಿ ಕೋಳಿ ಚರ್ಮದಲ್ಲಿ ಪ್ರೋಟೀನ್, ವಿಟಮಿನ್ ಬಿ, ಡಿ, ಇ ಸತು, ಕಬ್ಬಿಣ ಮತ್ತು ಸೆಲೆನಿಯಮ್‌ಗಳಂತಹ ಖನಿಜಗಳಿರುತ್ತವೆ. ಬಾಯ್ಲರ್‌ ಅಥವಾ ಫಾರ್ಮ್‌ ಕೋಳಿಗಳಿಗೆ ಹೋಲಿಸಿದರೆ ನಾಟಿ ಕೋಳಿಯಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು, ಆರೋಗ್ಯಕರವಾಗಿರುತ್ತದೆ. ಹೃದಯದ ಆರೋಗ್ಯಕ್ಕೂ ನಾಟಿ ಕೋಳಿ ಒಳ್ಳೆಯದು. (ಯಾವುದೇ ಔಷದಿ ಇಲ್ಲದ ಬೆಳೆದ ನಾಟಿ ಕೋಳಿ ಮಾತ್ರ ಸೂಕ್ತ)

(ಲೇಖಕರು: ಡಾ. ಎಡ್ವಿನಾ ರಾಜ್, ಮುಖ್ಯಸ್ಥರು, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟೆಟಿಕ್ಸ್ ವಿಭಾಗ, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.