ಎಐ ಚಿತ್ರ
ಬೆಳಕಿನ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ದೀಪಗಳ ಹಬ್ಬ ದೀಪಾವಳಿಯನ್ನು ಬರಮಾಡಿಕೊಳ್ಳಲು ಜನರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಜ್ಯೋತಿಷ ನಂಬುವವರು ದೀಪಾವಳಿ ಅಮಾವಾಸ್ಯೆಯ ಸಂದರ್ಭದಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷಿಗಳಾದ ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
ಎಐ ಚಿತ್ರ
ಯಾವ ತಪ್ಪು ಮಾಡಬಾರದು?
ದೀಪಾವಳಿ ಅಮಾವಾಸ್ಯೆಯಂದು ಯಾರು ಕೂಡ ಸ್ಮಶಾನದ ಕಡೆ ಹೋಗಬಾರದು ಮತ್ತು ನಿರ್ಜನ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಏಕೆಂದರೆ ಅಮಾವಾಸ್ಯೆಯಂದು ಸ್ಮಶಾನದಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹೀಗಾಗಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಹೆಚ್ಚು ಹೊತ್ತು ಮಲಗಿಕೊಂಡಿರಬಾರದು.
ಇನ್ನು, ದೀಪಾವಳಿ ಅಮಾವಾಸ್ಯೆಯಂದು ಗಂಡ–ಹೆಂಡತಿ ದೈಹಿಕ ಸಂಪರ್ಕ ಬೆಳೆಸಬಾರದು. ದೀಪಾವಳಿಯ ಶುಭ ದಿನದಂದು ಮನೆಯಲ್ಲಿ ಜಗಳವಾಡಬಾರದು. ಮನೆ ಬಾಗಿಲಿಗೆ ಭಿಕ್ಷೆಗೆಂದು ಬಂದ ಬಡವರನ್ನು ಅವಮಾನಿಸಬಾರದು. ಮಕ್ಕಳನ್ನು ಹೊಡೆಯುವುದು ಅಥವಾ ಬಯ್ಯುವುದನ್ನು ಮಾಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.