ADVERTISEMENT

ಅತಿ ಹೆಚ್ಚು ದಿನ ರೈಲಿನಲ್ಲಿ ಪ್ರಯಾಣಿಸಲು ಇಲ್ಲಿವೆ ಜಗತ್ತಿನ ಪ್ರಮುಖ ಮಾರ್ಗಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 11:45 IST
Last Updated 12 ನವೆಂಬರ್ 2025, 11:45 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ರೈಲಿನ ಪ್ರಯಾಣ ಆರಾಮ ಹಾಗೂ ಅಗ್ಗದ ಪ್ರಯಾಣವಾಗಿದೆ. ಸುದೀರ್ಘವಾದ ರೈಲಿನ ಪ್ರಯಾಣವು ಸುಂದರ ಅನುಭವವನ್ನು ಕಟ್ಟಿಕೊಡುತ್ತದೆ. ಅದರಲ್ಲಿಯೂ ಬೆಟ್ಟಗಳು, ಕಣಿವೆಗಳು, ಕಡಿದಾದ ದುರ್ಗಮ ಪ್ರದೇಶದಲ್ಲಿ ರೈಲು ಸಾಗುವಾಗ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ಪ್ರಪಂಚದಲ್ಲಿ ಅತ್ಯಂತ ಉದ್ದದ ರೈಲು ಮಾರ್ಗದಲ್ಲಿ ವಾರಗಟ್ಟಲೇ ಪ್ರಯಾಣಿಸಬಹುದು. ಹಾಗಾದರೆ ವಿಶ್ವದ ಅತಿ ಉದ್ದದ 5 ರೈಲು ಮಾರ್ಗಗಳು ಯಾವುವು, ಅವು ಇರುವುದು ಎಲ್ಲಿ ಎಂಬ ಮಾಹಿತಿ ತಿಳಿಯೋಣ. 

ADVERTISEMENT

ಟ್ರಾನ್ಸ್ ಸೈಬೀರಿಯನ್ ಎಕ್ಸ್‌ಪ್ರೆಸ್, (ರಷ್ಯಾ): 

ವಿಶ್ವದ ಅತಿ ಉದ್ದದ ರೈಲು ಮಾರ್ಗವೆಂಬ ಖ್ಯಾತಿ ಪಡೆದಿರುವ ‘ಟ್ರಾನ್ಸ್ ಸೈಬೀರಿಯನ್’ ರೈಲು ಐಷರಾಮಿ ಪ್ರಯಾಣಗಳಲ್ಲಿ ಒಂದಾಗಿದೆ. ಈ ರೈಲು ರಷ್ಯಾದ ಮಾಸ್ಕೋ ನಗರದಿಂದ ಆರಂಭವಾಗಿ ವ್ಲಾಡಿವೋಸ್ಟಾಕ್ ಹಾಗೂ ಚೀನಾದ ಬೀಜಿಂಗ್ ನಗರಕ್ಕೆ ತಲುಪುತ್ತದೆ. ಈ ರೈಲು ವಿಶಾಲವಾದ ಕಾಡು, ಹಳ್ಳಿಗಳು ಹಾಗೂ ಬೆಟ್ಟಗಳ ನಡುವೆ ಸಾಗುತ್ತದೆ. ರೈಲಿನಲ್ಲಿ ಸ್ಥಳೀಯ ಪ್ರಸಿದ್ಧ ಆಹಾರಗಳು ದೊರೆಯುತ್ತದೆ. 

ಉದ್ದ: 9,289 ಕಿ.ಮೀ.

ಸಮಯ: ಸುಮಾರು 8 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 

ಟ್ರಾನ್ಸ್ ಸೈಬೀರಿಯನ್ ಎಕ್ಸ್‌ಪ್ರೆಸ್,

ಬೀಜಿಂಗ್-ಮಾಸ್ಕೋ ರೈಲು: 

ವಿಶ್ವದ ಉದ್ದದ ರೈಲು ಮಾರ್ಗಗಳಲ್ಲಿ ‘ಬೀಜಿಂಗ್-ಮಾಸ್ಕೋ’ ರೈಲೂ ಒಂದು. ಟ್ರಾನ್ಸ್ ಮಂಗೋಲಿಯನ್ ಮಾರ್ಗ ಹಾಗೂ ಟ್ರಾನ್ಸ್-ಮಂಚೂರಿಯನ್ ಮಾರ್ಗ ಎಂಬ ಎರಡು ಮಾರ್ಗದಲ್ಲಿ ಈ ರೈಲು ಸಂಚರಿಸುತ್ತದೆ. 6 ಹಗಲು 5 ರಾತ್ರಿಗಳ ಪ್ರಯಾಣ ಮಾಡಿ ಚೀನಾ, ರಷ್ಯಾ, ಮಂಗೋಲಿಯಾ ಮತ್ತು ಕಜಕಿಸ್ತಾನ್ ಮೂಲಕ ಸಾಗುತ್ತದೆ. ಈ ರೈಲಿನಲ್ಲಿ ಪ್ರಯಾಣಿಸುವವರು ಗೋಬಿ ಮರುಭೂಮಿ, ಚೀನಾದ ಮಹಾಗೋಡೆ ಹಾಗೂ ಅಲ್ಟಾಯ್ ಪರ್ವತಗಳಂತಹ ಸುಂದರ ದೃಶ್ಯಗಳನ್ನು ನೋಡಬಹುದು.

ಉದ್ದ: ‘ಟ್ರಾನ್ಸ್ ಮಂಗೋಲಿಯನ್’ ಮಾರ್ಗ : 7,622 ಕಿ.ಮೀ, ‘ಟ್ರಾನ್ಸ್ ಮಂಚೂರಿಯನ್’ ಮಾರ್ಗ 8,961 ಕಿ.ಮೀ ಆಗಿದೆ.

ಬೀಜಿಂಗ್-ಮಾಸ್ಕೋ ರೈಲು

ಕೆನಡಾದ ರೈಲು ಮಾರ್ಗ: 

ವಿಶ್ವದ ಉದ್ದದ ರೈಲು ಮಾರ್ಗಗಳಲ್ಲಿ ಒಂದಾದ ಕೆನಡಾದ ರೈಲು ಮಾರ್ಗ ‘ಟೊರಂಟೋದಿಂದ’ ‘ವಾಂಕೋವರ್’ ನಡುವೆ ಇದೆ. ಇದನ್ನು ‘ಕೆನಡಾ’ದ ರೈಲು ಮಾರ್ಗ ಎಂತಲೂ ಕರೆಯುತ್ತಾರೆ. 4 ದಿನಗಳ ಸುದೀರ್ಘ ಪಯಣವಿರುವ ಈ ರೈಲು 4,460 ಕಿ.ಮೀ ಕ್ರಮಿಸುತ್ತದೆ. ಈ  ಮಾರ್ಗವು ಹಿಮದಿಂದ ಆವೃತವಾಗಿರುವುದರಿಂದ ಪ್ರಯಾಣಿಕರು ಹಿಮ ಕಣಿವೆ ಹಾಗೂ ಹಿಮ ಬೆಟ್ಟಗಳ ರಮಣೀಯ ದೃಶ್ಯಗಳನ್ನು ನೋಡಬಹುದು. 

ಕೆನಡಾದ ರೈಲು ಮಾರ್ಗ

ಇಂಡಿಯನ್ ಪೆಸಿಫಿಕ್ ರೈಲು:

‘ಇಂಡಿಯನ್ ಪೆಸಿಫಿಕ್ ರೈಲು’ ‘ಆಸ್ಟ್ರೇಲಿಯಾ’ದ ‘ಸಿಡ್ನಿ’ ಹಾಗೂ ‘ಪರ್ತ್’ ನಡುವೆ ಸಂಚರಿಸುತ್ತದೆ. ಈ ರೈಲು ಹಿಂದೂ ಮಹಾಸಾಗರ ಹಾಗೂ ಫೆಸಿಪಿಕ್‌ ಮಹಾಸಾಗರಗಳನ್ನು ಸಂಪರ್ಕಿಸುತ್ತದೆ. ಇದರ ಪ್ರಯಾಣ 4 ದಿನ, 3 ರಾತ್ರಿಗಳಿಂದ ಕೂಡಿದ್ದು, 4,352 ಕಿ.ಮೀ ದೂರವನ್ನು ಈ ರೈಲು ಕ್ರಮಿಸುತ್ತದೆ. ‘ಆಸ್ಟೇಲಿಯಾ’ದ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುತ್ತದೆ. ಈ ರೈಲಿನಲ್ಲಿ ಐಷಾರಾಮಿ ಸೌಲಭ್ಯಗಳು ದೊರೆಯುತ್ತವೆ. 

ಇಂಡಿಯನ್ ಪೆಸಿಫಿಕ್ ರೈಲು

ಶಾಂಘೈ-ಲಾಸಾ ರೈಲು: 

ಚೀನಾದ ‘ಶಾಂಘೈ’ ಹಾಗೂ ಟಿಬೆಟ್‌ನ ‘ಲಾಸಾ’ ನಡುವೆ ಸಂಚರಿಸುವ ರೈಲು ಮಾರ್ಗವಾಗಿದೆ. ಇದು ಅತ್ಯಂತ ದುರ್ಗಮ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ರೈಲು 4,373 ಕಿ.ಮೀ ದೂರವನ್ನು ಕ್ರಮಿಸಲು 3 ಅಗಲು 2 ರಾತ್ರಿ ತೆಗೆದುಕೊಳ್ಳುತ್ತದೆ. ಈ ರೈಲು ಶಾಂಘೈನಿಂದ ‘ಟಿಬೆಟ್‌’ ರಾಜ್ಯಧಾನಿಯನ್ನು ತಲುಪುತ್ತದೆ.

ಶಾಂಘೈ-ಲಾಸಾ ರೈಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.