
ದಕ್ಕಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶಬರಿಮಲೆ ಒಂದಾಗಿದೆ. ಅಯ್ಯಪ್ಪನ ಮಾಲೆ ಧರಿಸಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೇರಳದಲ್ಲಿರುವ ಅಯ್ಯಪ್ಪಸ್ವಾಮಿ ದೇವಾಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ, ಅದೇ ಮಾರ್ಗದಲ್ಲಿ ಸಿಗುವ ಇತರೆ ಸ್ಥಳಗಳಿಗೂ ಭೇಟಿ ನೀಡಬಹುದು. ಹಾಗಾದರೆ ಆ ಸ್ಥಳಗಳು ಯಾವುವು ಎಂಬುದನ್ನು ನೋಡೋಣ.
ಅಯ್ಯಪ್ಪಸ್ವಾಮಿಯ ದೇವಾಲಯವು ಸಮುದ್ರ ಮಟ್ಟದಿಂದ 1,535 ಅಡಿ ಎತ್ತರದಲ್ಲಿದೆ. ಸುತ್ತಲು ದಟ್ಟ ಕಾಡಿನಿಂದ ಆವೃತವಾಗಿರುವ ಇಲ್ಲಿಗೆ ನವೆಂಬರ್‌ನಿಂದ ಜನವರಿಯ ನಡುವೆ ಭೇಟಿ ನೀಡುವುದು ಉತ್ತಮವಾಗಿದೆ.
ಶಬರಿಮಲೆಯ ಇತರೆ ಪ್ರಮುಖ ಪ್ರವಾಸಿ ಕೇಂದ್ರಗಳಿವು:
ಮಣಿ ಮಂಟಪಂ
ಎರುಮೇಲಿ
ವಾವರ್ ದೇವಾಲಯ
ಅಯ್ಯಪ್ಪ ದೇವಾಲಯ
ಮಕರವಿಳಕ್ಕು
ಪಂಪಾ ಗಣಪತಿ ದೇವಾಲಯ
ಪಂಪಾ ನದಿ
ಮಲಿಕಪ್ಪುರಂ ದೇವಿ ದೇವಾಲಯ
ಶಬರಿಮಲೆಗೆ ಚಾರಣದ ಮೂಲಕ ತಲುಪಲು 3 ಮಾರ್ಗಗಳಿವೆ. ಅವುಗಳೆಂದರೆ,
ಎರುಮೇಲಿ ಮಾರ್ಗ
ಚಾಲಕ್ಕಯಂ ಮಾರ್ಗ
ವಂಡಿಪೆರಿಯಾರ್ ಮಾರ್ಗ
ಅಯ್ಯಪ್ಪಸ್ವಾಮಿಯ ಸೋದರಿಯ ದೇವಾಲಯ ಎಂದು ಹೇಳುವ ಮಳಿಕಪ್ಪುರಂ ಅಮ್ಮನ್ ದೇವಾಲಯಕ್ಕೆ ಭೇಟಿ ನೀಡಬಹುದು. ಜೊತೆಗೆ ಇಲ್ಲಿ ಹರಿಯುವ ಪವಿತ್ರವಾದ ಪಂಪಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಪೆರಿಯಾರ್ ವನ್ಯಜೀವಿ ಅಭಯಾರಣ್ಯ: ಥೆಕ್ಕಡಿ ಸಮೀಪವಿರುವ ಈ ಅಭಯಾರಣ್ಯವು ಪ್ರಮುಖ ವನ್ಯಜೀವಿ ತಾಣವಾಗಿದೆ. ಶಬರಿಮಲೆಯಿಂದ 50 ಕಿ.ಮೀ ದೂರದಲ್ಲಿರುವ ಈ ಅಭಯಾರಣ್ಯದಲ್ಲಿ ಹುಲಿ, ಸಿಂಹ, ಜಿಂಕೆ ಸೇರಿದಂತೆ ವೈವಿದ್ಯಮಯ ಪಕ್ಷಿಗಳನ್ನು ನೋಡಬಹುದಾಗಿದೆ.
ಶಬರಿಮಲೆಗೆ ಭೇಟಿ ನೀಡುವುದು ಹೇಗೆ?
ಶಬರಿಮಲೆಗೆ ಹತ್ತಿರದ ರೈಲು ನಿಲ್ದಾಣ: ಚೆಂಗನ್ನೂರ್ ರೈಲು ನಿಲ್ದಾಣ ಶಬರಿಮಲೆಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ಶಬರಿಮಲೆಗೆ 90 ಕಿ.ಮೀ ದೂರದಲ್ಲಿದೆ. ಕೊಟ್ಟಯಂ ರೈಲು ನಿಲ್ದಾಣ 115 ಕಿ.ಮೀ ಹಾಗೂ ಎರ್ನಾಕುಳಂ ರೈಲು ನಿಲ್ದಾಣ 160 ಕಿ.ಮೀ ದೂರದಲ್ಲಿದೆ.
ಶಬರಿಮಲೆಗೆ ಹತ್ತಿರದ ವಿಮಾನ ನಿಲ್ದಾಣ: ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶಬರಿಮಲೆಗೆ 160 ಕಿ.ಮೀ ದೂರದಲ್ಲಿದೆ. ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಶಬರಿಮಲೆಗೆ 175 ಕಿ.ಮೀ ದೂರದಲ್ಲಿದೆ.
ರಸ್ತೆ ಮೂಲಕ ತಲುಪುವುದಾದರೆ: ಕೇರಳದ ಪ್ರಮುಖ ನಗರಗಳಿಂದ ಶಬರಿಮಲೆಗೆ ಬಸ್ ಸೇವೆ ಇದೆ. ಬೆಂಗಳೂರಿನಿಂದಲೂ ಪ್ರತ್ಯೇಕ ಬಸ್ ವ್ಯವಸ್ಥೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.