ADVERTISEMENT

ಹೀಗಿರಲಿ ಐಷಾರಾಮಿ ಅಡುಗೆಮನೆ..ಟಾಪ್‌ 4 ಟಿಪ್ಸ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 21:00 IST
Last Updated 1 ನವೆಂಬರ್ 2021, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದು ಮನೆಯಲ್ಲಿ ಅಡುಗೆಮನೆಯೇ ಪ್ರಧಾನ. ತೆರೆದ ಅಥವಾ ಮುಚ್ಚಿದ ಅಡುಗೆಮನೆ ಯಾವುದೇ ಇರಲಿ ಅಡುಗೆಮನೆಯನ್ನು ವೈಭವದಿಂದ ಕಾಣುವಂತೆ ಇರಿಸಿಕೊಳ್ಳಬಹುದು. ಕೆಲವೊಂದು ಅಲಂಕಾರಿಕ ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಅಡುಗೆಮನೆಯನ್ನು ಐಷಾರಾಮಿಯಾಗಿ ಕಾಣುವಂತೆ ಮಾಡಬಹುದು. ಮಾಡರ್ನ್ ಎನ್ನಿಸುವ ಸಾಮಗ್ರಿಗಳು ಅಡುಗೆಮನೆಯ ಅಂದವನ್ನು ಹೆಚ್ಚಿಸಿ ನೋಟ ಬದಲಿಸುವುದರಲ್ಲಿ ಎರಡು ಮಾತಿಲ್ಲ. ಅಲಂಕಾರಿಕ ದೀಪಗಳು, ಕಪ್‌ ಸಾಸರ್‌ಗಳು, ಅಡುಗೆ ಸಾಮಗ್ರಿ ಸೆಟ್‌ಗಳು, ದೀಪಗಳು, ಪೇಂಟ್ ಚಿತ್ತಾರ ಇವು ಅಡುಗೆಮನೆಗೆ ಭಿನ್ನ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಈಗ ಹಬ್ಬದ ಸಮಯದಲ್ಲಿ ಆಫರ್‌ಗಳು ನಡೆಯುತ್ತಿದ್ದು ಕಡಿಮೆ ದರದಲ್ಲಿ ಅಡುಗೆಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಅಂದದ ಕಟ್ಲರಿ

ಕಾಫಿ ಕಪ್‌, ಚಮಚ–ಸೌಟುಗಳು, ಸಾಸರ್‌ಗಳು ಮುಂತಾದ ಅಡುಗೆಮನೆಯ ಪರಿಕರಗಳು ಯಾವಾಗಲೂ ಅಡುಗೆಮನೆಯ ಅಂದವನ್ನು ಹೆಚ್ಚಿಸುತ್ತವೆ. ಅಲ್ಲದೇ ಇವು ಅವಶ್ಯ ಕೂಡ ಹೌದು. ಬಣ್ಣ ಬಣ್ಣದ ಹಾಗೂ ಗಾಢ ಹೊಳಪಿನ ಅಡುಗೆ ಮನೆಯ ಪರಿಕರಗಳು ಅಂದವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೇ ವೈಭವಯುತವಾಗಿ ಕಾಣುವಂತೆಯೂ ಮಾಡುತ್ತವೆ. ಚಮತ್ಕಾರಿ ಕಟ್ಲರಿಗಳು ಅಡುಗೆಮನೆಯ ನೋಟವನ್ನೇ ಬದಲಿಸುವುದರಲ್ಲಿ ಎರಡು ಮಾತಿಲ್ಲ. ಗಾಢ ಬಣ್ಣದ ಮಗ್‌ಗಳು, ಬಣ್ಣದ ಚಿತ್ತಾರದ ಪ್ಲೇಟ್‌ಗಳು ಅಡುಗೆಮನೆಯ ಅಂದವನ್ನು ಹೆಚ್ಚಿಸುತ್ತವೆ.

ADVERTISEMENT

ಅಲಂಕಾರಿಕ ವಸ್ತುಗಳು

ಮನೆಯ ಹಾಲ್‌ ಹಾಗೂ ಬೆಡ್‌ರೂಮ್‌, ಲೀವಿಂಗ್ ರೂಮ್ ಮಾತ್ರವಲ್ಲ ಅಡುಗೆಕೋಣೆಯಲ್ಲೂ ಅಲಂಕಾರಿಕ ವಸ್ತುಗಳನ್ನು ಇರಿಸುವ ಮೂಲಕ ಅಂದವನ್ನು ಹೆಚ್ಚಿಸಬಹುದು. ಜೊತೆಗೆ ಇವುಗಳನ್ನು ಅಡುಗೆಮನೆಯಲ್ಲಿ ಇರಿಸುವ ಮೂಲಕ ಐಷಾರಾಮಿಯಾಗಿ ಕಾಣುವಂತೆ ಮಾಡಬಹುದು. ಅಂದದ ಗಾಜಿನ ಟೀ/ ಕಾಫಿ ಕೆಟಲ್‌, ಚಮಚದ ಸ್ಟ್ಯಾಂಡ್‌ ಮುಂತಾದವುಗಳನ್ನು ಖರೀದಿಸುವ ಮೂಲಕ ಅಡುಗೆಕೋಣೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಅಂದದ ಗಿಡಗಳು

ಹಾಲ್‌ ಅಥವಾ ಸಿಟೌಟ್‌ಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವಂತೆ ಅಡುಗೆಮನೆಯಲ್ಲೂ ಚಿಕ್ಕ ಚಿಕ್ಕ ಅಲಂಕಾರಿಕ ಗಿಡಗಳನ್ನು ಇರಿಸಬಹುದು. ಅಡುಗೆಮನೆಯಲ್ಲಿನ ಜಾಗಕ್ಕೆ ಅನುಗುಣವಾಗಿ ಈ ಗಿಡಗಳನ್ನು ಇರಿಸಬಹುದು. ಅದರಲ್ಲೂ ಔಷಧೀಯ ಗಿಡಗಳನ್ನು ಅಡುಗೆಮನೆಯಲ್ಲಿ ಇರಿಸುವುದು ಸೂಕ್ತ. ಟೇಬಲ್ ಮೇಲೆ ಸೂಕ್ತವಾಗುವ ಗಿಡಗಳನ್ನು ಇರಿಸಬಹುದು. ಅಡುಗೆಮನೆಯಲ್ಲಿ ನೇತು ಹಾಕುವ ಗಿಡಗಳನ್ನು ಇಡದೇ ಇರುವುದು ಸೂಕ್ತ. ಇವು ಸೀಲಿಂಗ್‌ನ ಅಂದವನ್ನು ಕೆಡಿಸುತ್ತವೆ. ‌

ಅದ್ಭುತ ಪರಿಮಳ

ಅಡುಗೆಮನೆಯಿಂದ ಕರಿದ, ಹುರಿದ ವಾಸನೆ ಬರುವುದು ಸಹಜ. ಇದನ್ನು ಸದಾ ಸ್ವಚ್ಛವಾಗಿಟ್ಟುಕೊಂಡರೂ ವಾಸನೆ ಅಡುಗೆಮನೆಯನ್ನು ಅಂದವನ್ನು ಹಾಳು ಮಾಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಕಾಂಪ್ಯಾಕ್ಟ್ ಡಿಫ್ಯೂಸರ್ ಅಥವಾ ಪರಿಮಳ ಬೀರುವ ವಸ್ತುಗಳನ್ನು ಇರಿಸಬಹುದು. ಇದರ ಸುವಾಸನೆಯು ಅಡುಗೆಮನೆಯನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಇದು ಐಷಾರಾಮಿ ಅಡುಗೆಮನೆಗೂ ಸಾಕ್ಷಿಯಾಗುವುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.