
ಸಂಕ್ರಾಂತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಾಲಕನೊಬ್ಬ ಗಾಳಿಪಟ ಹಾರಿಸುತ್ತಿರುವಾಗ ಗಾಳಿಯ ವೇಗಕ್ಕೆ ಬಾಲಕನೂ ಗಾಳಿಪಟ ದಾರದೊಂದಿಗೆ ಮೇಲಕ್ಕೆ ಹಾರುವ ವಿಡಿಯೊ ತುಣುಕೊಂದನ್ನು ಆಯೆಷಾ ಖಾನ್ ಎಂಬ ‘ಎಕ್ಸ್’ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ನಿಜವಲ್ಲ.
ವಿಡಿಯೊದ ಕೀಫ್ರೇಮ್ ಒಂದನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಪರಿಶೀಲನೆ ನಡೆಸಿದಾಗ ‘shawnnarranhanft’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2025ರ ಡಿಸೆಂಬರ್ 30ರಂದು ಪೋಸ್ಟ್ ಮಾಡಲಾದ ವಿಡಿಯೊ ಸಿಕ್ಕಿತು. ಈ ವಿಡಿಯೊವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವ ವಿಡಿಯೊವನ್ನೇ ಹೋಲುತ್ತಿತ್ತು. ಹಾಗಾಗಿ, ಅದು ಸಂಕ್ರಾಂತಿ ಹಬ್ಬದ ಸಮಯದ ವಿಡಿಯೊ ಅಲ್ಲ. ಈ ವಿಡಿಯೊವನ್ನು ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಲಾಗಿದೆ ಎಂಬುದನ್ನು ಆ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಅದೇ ಖಾತೆಯಲ್ಲಿದ್ದ ಇತರ ಪೋಸ್ಟ್‌ಗಳನ್ನು ಪರಿಶೀಲನೆ ಒಳಪಡಿಸಿದಾಗ ಆ ಖಾತೆಯಲ್ಲಿ ಇಂತಹ ಎಐ ಆಧಾರಿತ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದುದು ಕಂಡು ಬಂತು. ಮುಂದುವರಿದು, ವಿಡಿಯೊ ತುಣುಕನ್ನು ಎಐ ಪತ್ತೆ ಟೂಲ್ ಆದ ಹೈವ್ ಮಾಡರೇಷನ್ ಬಳಸಿಕೊಂಡು ಪರಿಶೀಲನೆಗೆ ಒಳಪಡಿಸಿದಾಗಲೂ ಅದು ಎಐ ಸೃಷ್ಟಿ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.