ADVERTISEMENT

ಫ್ಯಾಕ್ಟ್‌ ಚೆಕ್‌: ಶಿವನ ಪ್ರತಿಮೆಯನ್ನು ಆನೆ ಸೊಂಡಿಲಿನಲ್ಲಿ ಹಿಡಿದಿಟ್ಟಿಲ್ಲ

ಫ್ಯಾಕ್ಟ್ ಚೆಕ್
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
.
.   

ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಶಿವನ ಪ್ರತಿಮೆಯನ್ನು ಆನೆಯೊಂದು ಸೊಂಡಿನಲ್ಲಿ ಹಿಡಿದಿಟ್ಟಿರುವ ವಿಡಿಯೊದ ತುಣುಕೊಂದನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಸುಳ್ಳು. 

ವಿಡಿಯೊ ತುಣುಕಿನ ಕೀ ಫ್ರೇಮ್‌ ಒಂದನ್ನು ಗೂಗಲ್‌ ಲೆನ್ಸ್‌ ಬಳಸಿಕೊಂಡು ಹುಡುಕಾಡಿದಾಗ ಪ್ರಣವ್‌ ವಿಜಯನ್‌ ಎಂಬವರು ಅಕ್ಟೋಬರ್‌ 18ರಂದು ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್‌ ಸಿಕ್ಕಿತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕು ಮತ್ತು ಈ ಪೋಸ್ಟ್‌ನಲ್ಲಿರುವ ತುಣುಕು ಒಂದೇ ಆಗಿತ್ತು. ವಿಜಯನ್‌ ಖಾತೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅವರು ಎಐ ನಿರ್ಮಿತ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುವುದು ಗಮನಕ್ಕೆ ಬಂತು. ಅವರು ತಮ್ಮ ಪ್ರೊಫೈಲ್‌ ವಿವರದಲ್ಲಿ ‘ಎಐ ವಿಡಿಯೊ ಜನರೇಟರ್‌’ ಎಂದೇ ಬರೆದುಕೊಂಡಿದ್ದಾರೆ. ಇದರ ಆಧಾರದಲ್ಲಿ ವಿಡಿಯೊ ತುಣುಕನ್ನು ಝೂಕ್‌ ಎಐ ಪತ್ತೆ ಟೂಲ್‌ ಮೂಲಕ ಪರಿಶೀಲನೆ ನಡೆಸಿದಾಗ ವಿಡಿಯೊದ ಶೇ 99ರಷ್ಟು ಭಾಗವು ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿರುವುದು ದೃಢಪಟ್ಟಿತು. ಪ್ರಣವ್‌ ವಿಜಯನ್‌ ಅವರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ, ಅದು ಎಐ ವಿಡಿಯೊ ಎಂಬುದನ್ನು ದೃಢಪಡಿಸಿದರು ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT