ಜನವರಿ 1ರ ಹೊಸ ವರ್ಷದ ದಿನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನಮಾಜ್ ಮಾಡಿದ್ದರೇ? ಹೌದು, ಇದು ಬ್ರೇಕಿಂಗ್ ನ್ಯೂಸ್ ಎನ್ನುತ್ತಿವೆ ಸಾಮಾಜಿಕ ಜಾಲತಾಣಗಳು. ಕೇಜ್ರಿವಾಲ್ ಅವರು ದೆಹಲಿಯ ಜಾಮಾ ಮಸೀದಿಯಲ್ಲಿ ಟೊಪ್ಪಿಗೆ ಧರಣಿಸಿ ಎರಡೂ ಕೈಗಳನ್ನು ಜೋಡಿಸಿ ಪ್ರಾರ್ಥಿಸುತ್ತಿರುವ ಚಿತ್ರ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಈ ಬಗ್ಗೆ ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್ ಚೆಕ್ ಪರಿಶೀಲನೆ ನಡೆಸಿದಾಗ, ಈ ಚಿತ್ರವು 2018ರಲ್ಲಿ ಅನ್‌ಪೇಯ್ಡ್ ಟೈಮ್ಸ್ ಟ್ವಿಟರ್ ತಾಣದಲ್ಲಿ ಪ್ರಕಟವಾಗಿದೆ. ಜೊತೆಗೆ ಗೆಟ್ಟಿ ಇಮೇಜಸ್‌ನಲ್ಲೂ ಲಭ್ಯವಿದ್ದು, 2016ರಲ್ಲಿ ತೆಗೆದ ಚಿತ್ರ ಎಂದು ಹೇಳುತ್ತದೆ. ಮತ್ತೆ ಪರಿಶೀಲಿಸಿದಾಗ, ಇಂಡಿಯನ್ಸ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ 2016ರಲ್ಲಿ ಇದೇ ಚಿತ್ರ ಪ್ರಕಟವಾಗಿದ್ದು, ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಮಲೇರ್‌ಕೊಟ್ಲ ಎಂಬಲ್ಲಿ ಮುಸ್ಲಿಮರ ಇಫ್ತಾರ್ ಕೂಟದಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ. ಅಂದರೆ ಈ ಚಿತ್ರ 2021ಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಖಚಿತಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.