ADVERTISEMENT

Fact Check | ಮಗಳನ್ನೇ ಮದುವೆಯಾದ ಅಪ್ಪ; ಇದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
   

ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪ ಮಗಳಂತೆ ಕಾಣುವ ಇಬ್ಬರು ಜತೆಯಲ್ಲಿ ಕುಳಿತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಪಾಕಿಸ್ತಾನದ ಇವರಿಬ್ಬರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಅಪ್ಪ ಮಗಳನ್ನೇ ಮದುವೆ ಆಗಿದ್ದಾನೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದರ ಕೀಫ್ರೇಮ್‌ಗಳು ರಾಜ್ ಠಾಕೂರ್ ಎನ್ನುವವರ ಇನ್ಸ್‌ಟಾಗ್ರಾಂ ಖಾತೆಯ 2025 ಮಾ. 6ರ ಪೋಸ್ಟ್‌ಗೆ ಸಂಪರ್ಕ ನೀಡಿದವು. ಅವರ ಪೋಸ್ಟ್‌ನಲ್ಲಿ ಈ ವಿಡಿಯೊ ಇದೆ. ಇದು ಪಾತ್ರಧಾರಿಗಳನ್ನು ಬಳಸಿಕೊಂಡು ಸೃಷ್ಟಿ ಮಾಡಲಾದ ವಿಡಿಯೊ ಎಂದು ಅವರೇ ಹೇಳಿಕೊಂಡಿರುವುದು ಕಂಡುಬಂತು. ಪೂರ್ಣ ವಿಡಿಯೊ ಅನ್ನು ಅವರ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡಿತು. ರಾಜ್ ಠಾಕೂರ್ ದೆಹಲಿಯ ಒಬ್ಬ ವಿಡಿಯೊ ಕ್ರಿಯೇಟರ್ ಆಗಿದ್ದು, ಅವರೇ ನಟನಟಿಯರನ್ನು ಬಳಸಿಕೊಂಡು ಇಂಥ ವಿಡಿಯೊಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ ಎನ್ನುವುದು ಅವರ ಖಾತೆಯಿಂದ ತಿಳಿಯುತ್ತದೆ. ಹೀಗೆ ಸೃಷ್ಟಿ ಮಾಡಲಾದ ವಿಡಿಯೊ ಅನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ‘ಫ್ಯಾಕ್ಟ್‌ಲಿ’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT