ADVERTISEMENT

ಕನ್ಹಯ್ಯಾ ರ‍್ಯಾಲಿಯಲ್ಲಿ ಅಫ್ಜಲ್ ಗುರು ಫೋಟೊ: ಸಾಮಾಜಿಕ ತಾಣದಲ್ಲಿ ಸುಳ್ಳುಸುದ್ದಿ!

​ಪ್ರಜಾವಾಣಿ ವಾರ್ತೆ
Published 4 ಮೇ 2019, 15:56 IST
Last Updated 4 ಮೇ 2019, 15:56 IST
   

ನವದೆಹಲಿ: ಬೇಗುಸರಾಯ್ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ಹಯ್ಯಾ ಕುಮಾರ್ಚುನಾವಣಾ ರ‍್ಯಾಲಿಯಲ್ಲಿ ಉಗ್ರ ಅಫ್ಜಲ್ ಗುರು ಚಿತ್ರ ಬಳಸಿದ್ದಾರೆಎಂಬ ಸುಳ್ಳುಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

2011ರಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ಪ್ರಕರಣದ ದೋಷಿಅಫ್ಜಲ್ ಗುರು ಚಿತ್ರವನ್ನು ಚುನಾವಣಾ ರ‍್ಯಾಲಿಯಲ್ಲಿ ಬಳಸಿದ್ದಕ್ಕಾಗಿ ಕನ್ಹಯ್ಯಾ ಕುಮಾರ್‌ನ್ನು ಹಲವಾರು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಆದರೆ ಚುನಾವಣಾ ರ‍್ಯಾಲಿಯ ಫೋಟೊದಲ್ಲಿ ಅಫ್ಜಲ್ ಗುರು ಫೋಟೊವನ್ನು ಎಡಿಟ್ ಮಾಡಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್

ADVERTISEMENT


ಕನ್ಹಯ್ಯಾ ಕುಮಾರ್ ಅವರ ಚುನಾವಣಾ ರ‍್ಯಾಲಿ ಫೋಟೊ ಇದು.ಬೇಗುಸರಾಯ್‌ಯಲ್ಲಿ ಈ ಚುನಾವಣಾ ರ‍್ಯಾಲಿ ನಡೆದಿತ್ತು.

ರ‍್ಯಾಲಿಗೆ ಬಳಸಿರುವ ವಾಹನದಲ್ಲಿ ಅಫ್ಜಲ್ ಗುರು ಫೋಟೊ ಇದೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ ಇದು ಫೋಟೊಶಾಪ್ ಮಾಡಿದ ಚಿತ್ರವಾಗಿದೆ.


ಬೇಗುಸರಾಯ್ ರ‍್ಯಾಲಿಯ ನಿಜವಾದ ಚಿತ್ರ ನೋಡಿದರೆ ಸಿಪಿಐ ಪಕ್ಷದ ಚಿಹ್ನೆಯ ಹಿಂದೆ ಕನ್ಹಯ್ಯಾ ಕುಮಾರ್ ಇದ್ದಾರೆ.ಚುನಾವಣಾ ರ‍್ಯಾಲಿಯ ವಿಡಿಯೊವನ್ನು ಎಬಿಪಿ ನ್ಯೂಸ್ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. ಇದರಲ್ಲಿ ಕನ್ಹಯ್ಯಾ ಕುಮಾರ್ ಸಿಪಿಐ ಪಕ್ಷದ ಚಿಹ್ನೆ ಇರುವ ವಾಹನದಲ್ಲಿ ಸಾಗುತ್ತಾ ಜನರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.