ADVERTISEMENT

Fact Check: ದುಬೈನ ಬುರ್ಜ್‌ ಖಲೀಫಾ ಬಳಿ ಯುದ್ಧವಿಮಾನಗಳ ಹಾರಾಟದ ವಿಡಿಯೊ ನಿಜವಲ್ಲ

ಫ್ಯಾಕ್ಟ್ ಚೆಕ್
Published 3 ಮಾರ್ಚ್ 2026, 20:15 IST
Last Updated 3 ಮಾರ್ಚ್ 2026, 20:15 IST
.
.   

ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಪಡೆದಿರುವ ದುಬೈನ ಬುರ್ಜ್‌ ಖಲೀಫಾದ ಸುತ್ತಮುತ್ತ ಯುದ್ಧವಿಮಾನಗಳು ದಾಳಿ ಮಾಡುತ್ತಿರುವ ವಿಡಿಯೊ ತುಣುಕೊಂದನ್ನು @ತಾರೀಖ್‌_78 ಎಂಬ ‘ಎಕ್ಸ್‌’ ಬಳಕೆದಾರ ಸೋಮವಾರ ಹಂಚಿಕೊಂಡಿದ್ದಾರೆ. ಇರಾನ್‌ ದುಬೈ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಪೋಸ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ. ಆದರೆ ಇದು ಸುಳ್ಳು. 

ಇನ್‌ವಿಡ್‌ ಟೂಲ್‌ ಮೂಲಕ ವಿಡಿಯೊ ತುಣುಕಿನಿಂದ ಕೀ ಫ್ರೇಮ್‌ಗಳನ್ನು ಪ್ರತ್ಯೇಕಿಸಿ, ಒಂದು ಕೀ ಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ ಬಳಸಿ ಹುಡುಕಿದಾಗ, ಹಲವರು ಈ ವಿಡಿಯೊವನ್ನು ಹಂಚಿರುವುದು ಕಂಡು ಬಂತು. ಬುರ್ಜ್‌ ಖಲೀಫಾದ ಮೇಲೆ ದಾಳಿ ನಡೆದಿದೆಯೇ ಎಂಬುದನ್ನು ತಿಳಿಯಲು ಗೂಗಲ್‌ನಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಲಾಯಿತು. ಆದರೆ, ಈ ಬಗ್ಗೆ ಯಾವುದೇ ವರದಿಗಳು ಸಿಗಲಿಲ್ಲ.

ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅದರ ಅಸಲಿತನದ ಬಗ್ಗೆ ಅನುಮಾನ ಮೂಡಿತು. ವಿಡಿಯೊ ತುಣುಕನ್ನು ಸೈಟ್‌ಎಂಜಿನ್‌ ಎಂಬ ಎಐ ಪತ್ತೆ ಟೂಲ್‌ ಮೂಲಕ ಪರಿಶೀಲಿಸಿದಾಗ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು. ಬುರ್ಜ್‌ ಖಲೀಫಾ ಸುತ್ತಮುತ್ತ ಇರಾನ್‌ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದೆ ಎಂದು ಎಐ ವಿಡಿಯೊವನ್ನು ಸೃಷ್ಟಿಸಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.