ADVERTISEMENT

Fact Check: ಹಾಲು ಮಾರಾಟ ಮಾಡದಿರುವಂತೆ ಕಿಸಾನ್ ಸಂಯುಕ್ತ ಮೋರ್ಚಾ ಕರೆ ನೀಡಿತ್ತೇ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 19:31 IST
Last Updated 5 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೆಟ್ರೋಲ್ ಬೆಲೆ ₹ 100ರ ಗಡಿ ದಾಟಿದೆ. ಡೀಸೆಲ್ ಬೆಲೆಯೂ ₹ 100ರತ್ತ ಹೋಗುತ್ತಿದೆ. ಹೀಗಾಗಿ ರೈತರು ಹಾಲನ್ನು ₹ 100ಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು. ಸರ್ಕಾರವು ಒಂದು ಲೀಟರ್‌ ಹಾಲಿಗೆ ಕನಿಷ್ಠ ₹ 100 ನೀಡಬೇಕು. ಈ ಬೇಡಿಕೆಯನ್ನು ಈಡೇರಿಸುವವರೆಗೆ ರೈತರು ಹಾಲನ್ನು ಮಾರಾಟ ಮಾಡಬಾರದು ಎಂದು ಕಿಸಾನ್ ಏಕತಾ ಮೋರ್ಚಾ ಕರೆ ನೀಡಿದೆ. ಕಷ್ಟಪಟ್ಟು ಉತ್ಪಾದಿಸಿದ ಹಾಲನ್ನು ಮಾರಾಟ ಮಾಡದೇ ಇರಲು ಹೇಗೆ ಸಾಧ್ಯ? ಹೀಗೆ ಮಾಡಿದರೆ ರೈತರಿಗೆ ನಷ್ಟವಾಗುತ್ತದೆ ಎಂಬ ವಿವರ ಇರುವ ಪೋಸ್ಟ್‌ಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ.

ಹಾಲು ಮಾರಾಟ ಮಾಡದೇ ಇರುವಂತೆ ರೈತರಿಗೆ ನಾವು ಕರೆ ನೀಡಿಲ್ಲ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಹೇಳಿದೆ. ನಮ್ಮ ಒಕ್ಕೂಟದ ಹೆಸರಿನಲ್ಲಿ ರೈತರ ಹಾದಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ರೈತರು ಇಂತಹ ಕರೆಗಳನ್ನು ಕಡೆಗಣಿಸಬೇಕು ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಪ್ರತಿ ಲೀಟರ್‌ ಹಾಲಿಗೆ ₹ 100 ನೀಡಬೇಕು ಎಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ರೈತರು ಫೆಬ್ರುವರಿ ಕೊನೆಯ ವಾರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಚಿತ್ರವನ್ನು ನಮ್ಮ ಸಂಘಟನೆ ಹೆಸರಿನ ನಕಲಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇದು ಸುಳ್ಳು ಸುದ್ದಿ ಎಂದು ಕಿಸಾನ್ ಏಕತಾ ಮೋರ್ಚಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT