ADVERTISEMENT

ಫ್ಯಾಕ್ಟ್ ಚೆಕ್ | ಮುಸ್ಕಾನ್ ಅಲ್ಲಾಹು ಅಕ್ಬರ್ ಕೂಗಿದ್ದರ ಹಿಂದೆ ಕಾಂಗ್ರೆಸ್ ಸಂಚು?

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2022, 20:00 IST
Last Updated 13 ಫೆಬ್ರುವರಿ 2022, 20:00 IST
ಅಂಬಾ ಪ್ರಸಾದ್ ಅವರು ಹಂಚಿಕೊಂಡಿದ್ದ ಈ ಚಿತ್ರವನ್ನು ತಿರುಚಿ, ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಅಂಬಾ ಪ್ರಸಾದ್ ಅವರು ಹಂಚಿಕೊಂಡಿದ್ದ ಈ ಚಿತ್ರವನ್ನು ತಿರುಚಿ, ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ   

ಸುಳ್ಳು:
ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಕೇಸರಿ ಶಾಲು ತೊಟ್ಟು, ಜೈ ಶ್ರೀರಾಂ ಎಂದು ಘೋಷಣೆ ಕೂಗುತ್ತಿದ್ದಾಗ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ಬುರ್ಖಾಧಾರಿ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಅವರದ್ದೆಂದು ಹೇಳಲಾಗುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಮುಸ್ಕಾನ್ ಅವರು ಕಾಂಗ್ರೆಸ್‌ನ ರಾಹುಲ್ ಗಾಂಧಿ ಜತೆಗೆ ಇದ್ದಾರೆ. ಹಿಜಾಬ್‌ ವಿವಾದ ಮತ್ತು ಮುಸ್ಕಾನ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರ ಹಿಂದೆ ಕಾಂಗ್ರೆಸ್‌ನ ಸಂಚು ಇದೆ’ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ರಾಹುಲ್‌ ಜತೆಗೆ ಯುವತಿಯೊಬ್ಬರು ನಿಂತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಸತ್ಯ:
‘ವೈರಲ್ ಆಗಿರುವ ಚಿತ್ರದೊಂದಿಗೆ ನೀಡಿರುವ ವಿವರ ಸಂಪೂರ್ಣ ತಪ್ಪು. ರಾಹುಲ್ ಗಾಂಧಿ ಅವರ ಜತೆ ನಿಂತಿರುವ ಯುವತಿ, ಜಾರ್ಖಂಡ್‌ ಕಾಂಗ್ರೆಸ್‌ನ ಬರ್ಕಾಗಾಂವ್ ಶಾಸಕಿ ಅಂಬಾ ಪ್ರಸಾದ್. ಆ ಚಿತ್ರವನ್ನು ಸ್ವತಃ ಅಂಬಾ ಪ್ರಸಾದ್ ಅವರು ಈಚೆಗಷ್ಟೇ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಅಂಬಾ ಪ್ರಸಾದ್ ಅವರ ಹಣೆಬೊಟ್ಟನ್ನು ಅಳಿಸಿ, ಚಿತ್ರವನ್ನು ತಿರುಚಲಾಗಿದೆ. ತಿರುಚಲಾದ ಚಿತ್ರವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಬೀಬಿ ಮುಸ್ಕಾನ್ ಖಾನ್ ಅವರಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT