ADVERTISEMENT

Fact Check: ಫಾರ್ಮಾಸಿಸ್ಟ್‌ಗಳು ಕ್ಲಿನಿಕ್ ತೆರೆದು ಔಷಧ ನೀಡಲು ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 21:01 IST
Last Updated 31 ಡಿಸೆಂಬರ್ 2020, 21:01 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಹೆಚ್ಚಿತ್ತಿದ್ದರೂ ಬೇಡಿಕೆ ತಗ್ಗಿಲ್ಲ. ಹೀಗಾಗಿ ಔಷಧ ಅಂಗಡಿಯವರೂ (ಫಾರ್ಮಾಸಿಸ್ಟ್‌) ಸಹ ರೋಗಿಗಳನ್ನು ಪರೀಕ್ಷಿಸಿ, ಔಷಧಿ ನೀಡಬಹುದು. ವೈದ್ಯರ ಕೆಲಸ ನಿರ್ವಹಿಸಲು ಅವರಿಗೂ ಸರ್ಕಾರ ಅನುಮತಿ ನೀಡಿದೆ ಎಂಬುದಾಗಿ ಹಿಂದಿ ಪತ್ರಿಕೆಯೊಂದಲ್ಲಿ ವರದಿ ಪ್ರಕಟವಾಗಿದೆ.

ಫಾರ್ಮಾಸಿಸ್ಟ್‌ಗಳು ಕ್ಲಿನಿಕ್ ತೆರದು, ರೋಗಿಗಳ ತಪಾಸಣೆ ನಡೆಸಿ ಔಷಧ ನೀಡಲು ಫಾರ್ಮಸಿ ಆಕ್ಟ್ ಮತ್ತು ಫಾರ್ಮಸಿ ಪ್ರಾಕ್ಟೀಸ್ ರೂಲ್ಸ್ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ. ಪತ್ರಿಕೆಯಲ್ಲಿ ಬಂದಿರುವ ವರದಿ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರದ ಪಿಐಬಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT