ADVERTISEMENT

ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?

ಫ್ಯಾಕ್ಟ್ ಚೆಕ್
Published 8 ಜನವರಿ 2026, 19:11 IST
Last Updated 8 ಜನವರಿ 2026, 19:11 IST
<div class="paragraphs"><p>ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?</p></div>

ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?

   

ಬಾಲಿವುಡ್ ನಟ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ ತಂಡದ ಮಾಲೀಕ ಶಾರುಕ್ ಖಾನ್ ಅವರು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡಕ್ಕೆ ಖರೀದಿಸಿದ್ದು ವಿವಾದಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾರುಕ್ ಖಾನ್ ಅವರ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನೀವು ದೇಶಕ್ಕಾಗಿ ಏನಾದರೂ ಮಾಡಬೇಕಿದ್ದರೆ, ಭಾರತದಿಂದ ಬಾಂಗ್ಲಾಕ್ಕೆ ವಿದ್ಯುತ್ ಪೂರೈಸುತ್ತಿರುವ ಉದ್ಯಮಿ ಅದಾನಿ ವಿರುದ್ಧ ಧ್ವನಿಯೆತ್ತಿ’ ಎಂದು ಶಾರುಕ್ ಹೇಳಿರುವುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಇನ್‌ವಿಡ್ ಸಾಧನದ ಮೂಲಕ ವಿಡಿಯೊ ಕೀಫ್ರೇಮ್‌ಗಳನ್ನು ವಿಂಗಡಿಸಿ, ಅವುಗಳನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ‘ಟಾಕ್ಸ್ ಅಟ್ ಗೂಗಲ್’ ಎನ್ನುವ ಯುಟ್ಯೂಬ್ ಚಾನೆಲ್‌ನಲ್ಲಿ ಶಾರುಕ್ ಅವರ ಇಂಥದ್ದೇ ವಿಡಿಯೊ ಅಪ್‌ಲೋಡ್ ಆಗಿರುವುದು ಕಂಡಿತು. 2014 ಅ.2ರಂದು ಅಪ್‌ಲೋಡ್ ಮಾಡಲಾದ ವಿಡಿಯೊದಲ್ಲಿ ಶಾರುಕ್ ಅವರು ಗೂಗಲ್‌ಪ್ಲೆಕ್ಸ್‌ನಲ್ಲಿ ಸುಂದರ್ ಪಿಚ್ಚೈ ಅವರೊಂದಿಗೆ ಸಂವಾದ ಮತ್ತು ತಮ್ಮ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 2014ರ ವಿಡಿಯೊವನ್ನು ತಿದ್ದಿ ಅದನ್ನು ಕೆಕೆಆರ್ ತಂಡದ ವಿವಾದದೊಂದಿಗೆ ಬೆಸೆದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.