ADVERTISEMENT

ಫ್ಯಾಕ್ಟ್‌ಚೆಕ್‌: ಪಾಕ್‌ನ ರಾಜತಾಂತ್ರಿಕ ನಿಲುವನ್ನು ಶಶಿ ತರೂರು ಶ್ಲಾಘಿಸಲಿಲ್ಲ

ಫ್ಯಾಕ್ಟ್ ಚೆಕ್
Published 16 ಫೆಬ್ರುವರಿ 2026, 22:30 IST
Last Updated 16 ಫೆಬ್ರುವರಿ 2026, 22:30 IST
.
.   

ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರು ಅವರು ಟ್ವೆಂಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾಗವಹಿಸದೇ ಇರುವ ಪಾಕಿಸ್ತಾನದ ನಿರ್ಧಾರವನ್ನು (ಆ ನಂತರ ಅದು ಭಾಗವಹಿಸುವುದಾಗಿ ಹೇಳಿತ್ತು) ಸ್ವಾಗತಿಸಿ, ಪಾಕಿಸ್ತಾನದ ರಾಜತಾಂತ್ರಿಕ ನಿಲುವನ್ನು ಶ್ಲಾಘಿಸಿ ಮಾಧ್ಯಮಗಳಿಗೆ ನೀಡಿದ್ದಾರೆ ಎನ್ನಲಾದ ಹೇಳಿಕೆ ವಿಡಿಯೊವನ್ನು ‘ವೊಕ್‌ ಸ್ಪೋರ್ಟ್ಸ್‌’ ಫೇಸ್‌ಬುಕ್‌ ಪುಟದಲ್ಲಿ ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾಗಿತ್ತು. ಆದರೆ, ಇದು ಸುಳ್ಳು. 

ವಿಡಿಯೊದ ಕೀಫ್ರೇಮ್‌ ಒಂದನ್ನು ರಿವರ್ಸ್‌ ಇಮೇಜ್‌ ಸರ್ಚ್‌ ವಿಧಾನದಲ್ಲಿ ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಾಟ ನಡೆಸಿದಾಗ, ಇದೇ ಪ್ರತಿಪಾದನೆಯೊಂದಿಗೆ ಹಲವರು ಇದೇ ವಿಡಿಯೊವನ್ನು ಪೋಸ್ಟ್‌ ಮಾಡಿರುವುದು ಕಂಡು ಬಂತು. ಇನ್ನಷ್ಟು ಹುಡುಕಿದಾಗ ಇಂಡಿಯಾ ಟುಡೇಯ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೊ ಒಂದು ಸಿಕ್ಕಿತು. ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಇರುವ ವಿಡಿಯೊವನ್ನೇ ಅದು ಹೋಲುತ್ತಿತ್ತು. ಕ್ರಿಕೆಟ್‌ ವಿಶ್ವಕಪ್‌ ವಿವಾದದ ಬಗ್ಗೆ ತರೂರು ಅವರು ಅದರಲ್ಲಿ ಹಿಂದಿಯಲ್ಲಿ ಮಾತನಾಡಿದ್ದರು. ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಹೇಳಿದ್ದರು. ಆದರೆ, ಎಲ್ಲೂ ಅವರು ಪಾಕಿಸ್ತಾನವನ್ನು ಹೊಗಳಿರಲಿಲ್ಲ. ಅನುಮಾನ ಬಂದು ವಿಡಿಯೊದಲ್ಲಿರುವ ಧ್ವನಿಯನ್ನು ರಿಸೆಂಬಲ್‌ ಎಐ ಎಂಬ ಎಐ ಪತ್ತೆ ಟೂಲ್‌ ಬಳಸಿ ಪರಿಶೀಲಿಸಿದಾಗ ಅದು, ನಕಲಿ ಆಡಿಯೊ ಎಂಬುದು ದೃಢಪಟ್ಟಿತು. ತರೂರು ಅವರ ಮೂಲ ಧ್ವನಿಯನ್ನು ಎಐ ಮೂಲಕ ತಿರುಚಿ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT