ADVERTISEMENT

Fack Check: ಠಾಣೆ ಮೇಲ್ಸೇತುವೆಯಲ್ಲಿ ಬಸ್ ಸಿಕ್ಕಿಹಾಕಿಕೊಂಡಿದೆ ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 13 ಫೆಬ್ರುವರಿ 2026, 0:30 IST
Last Updated 13 ಫೆಬ್ರುವರಿ 2026, 0:30 IST
   
ಮಹಾರಾಷ್ಟ್ರದ ಠಾಣೆಯ ಮೀರಾ ಭಾಯಂದರ್‌ ನಗರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಬಸ್‌ ಒಂದು ಸಿಕ್ಕಿಹಾಕಿಕೊಂಡಿದೆ ಎಂದು ಪ್ರತಿಪಾದಿಸುತ್ತಾ ಚಿತ್ರವೊಂದನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಲಾಗಿದೆ. ‘ಮುಂಬೈನಲ್ಲಿ ಗುಜರಾತ್‌ ಮಾದರಿಯ ಅಭಿವೃದ್ಧಿ’ ಎಂದು ಅದಕ್ಕೆ ಒಕ್ಕಣೆ ನೀಡಲಾಗಿದೆ. ಕೇರಳದ ಕಾಂಗ್ರೆಸ್‌ ಘಟಕದ ಖಾತೆಯಲ್ಲೂ ಆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇತ್ತೀಚೆಗೆ ಈ ಮೇಲ್ಸೇತುವೆಯ ವಿನ್ಯಾಸ ತೀವ್ರ ಟೀಕೆಗೆ ಗುರಿಯಾಗಿತ್ತು ಎನ್ನುವುದು ನಿಜ. ಆದರೆ, ಬಸ್‌ ಅಲ್ಲಿ ಸಿಕ್ಕಿಹಾಕಿಕೊಂಡಿದೆ ಎಂಬುದು ಸುಳ್ಳು ಮಾಹಿತಿ. 

ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅದರ ಅಸಲಿತನದ ಬಗ್ಗೆ ಅನುಮಾನ ಬಂತು. ಹೈವ್‌ ಮಾಡರೇಷನ್‌ ಎಂಬ ಎಐ ಪತ್ತೆ ಟೂಲ್‌ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಅದು ಎಐ ಮೂಲಕ ಸೃಷ್ಟಿಸಿದ ಚಿತ್ರ ಎಂಬುದು ಖಚಿತವಾಯಿತು. ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ, ಗೂಗಲ್‌ನ ಎಐ ಟೂಲ್‌ ಆಗಿರುವ ಜೆಮಿನಿಯ ವಾಟರ್‌ ಮಾರ್ಕ್‌ ಕೂಡ ಅದರಲ್ಲಿತ್ತು. ಜೆಮಿನಿ ಎಐ ಟೂಲ್‌ ಬಳಸಿ ಚಿತ್ರವನ್ನು ಮಾರ್ಪಡಿಸಿರುವುದು ದೃಢಪಟ್ಟಿತು. ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುವುದಕ್ಕಾಗಿ ಗೂಗಲ್‌ ಜೆಮಿನಿ ಪ್ರೊ ಟೂಲ್‌ ಮೂಲಕ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಿದಾಗ ಗೂಗಲ್‌ನ ಎಐ ಟೂಲ್‌ ಬಳಸಿ ಈ ಚಿತ್ರವನ್ನು ಸೃಷ್ಟಿಸಿರುವುದು/ಎಡಿಟ್‌ ಮಾಡಿರುವುದು ಪತ್ತೆಯಾಯಿತು ಎಂದು ಬೂಮ್‌ ಲೈವ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.