ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರು ರಚಿಸಿದ್ದರು ಎನ್ನಲಾದ ನಟಿಯೊಬ್ಬರ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ 16ನೇ ಶತಮಾನದ ಮೊನಾಲಿಸಾ ಚಿತ್ರದೊಂದಿಗೆ ರವಿವರ್ಮ ಅವರ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಎರಡೂ ಚಿತ್ರಗಳನ್ನು ಗಮನಿಸಿ. ಪ್ರಚಾರ ಲಾಬಿಗಳು ಹೇಗಿವೆ ಎಂಬುದರ ಕುರಿತು ಯೋಚಿಸಿ’ ಎಂಬ ಉಲ್ಲೇಖ ಇವೆ.
ಈ ಚಿತ್ರವನ್ನು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಪರಿಶೀಲಿಸಿದೆ. ಚಿತ್ರದ ಕೆಳಭಾಗದಲ್ಲಿ ಮಸುಕಾದ ರೂಪದಲ್ಲಿ ಶ್ರುವಂ ಸ್ಟುಡಿಯೋಸ್ ಎಂಬ ಬರಹ ಇದೆ. ಗೂಗಲ್ ರಿವರ್ಸ್ ಇಮೇಜ್ ಬಳಸಿ ಪರಿಶೀಲಿಸಿದಾಗ, ಇದು ಪಿಂಟರೆಸ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಈ ಚಿತ್ರವು ರಾಜಾ ರವಿವರ್ಮ ಅವರ ಮೂಲ ಕಲಾಕೃತಿಯಲ್ಲ. ಈ ಚಿತ್ರವು ರವಿವರ್ಮ ಅವರ ಕಲಾಕೃತಿಯ ಮರುಸೃಷ್ಟಿ ಎಂಬುದು ದೃಢಪಟ್ಟಿದೆ. ಚಿತ್ರದ ಅಡಿಬರಹದಲ್ಲೂ ಮರುಸೃಷ್ಟಿಯ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಚಿತ್ರವನ್ನು ದಕ್ಷಿಣ ಭಾರತದ ನಟಿ ಸ್ವಾತಿ ರೆಡ್ಡಿ ಅವರು 2019ರ ಜೂನ್ 16ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.