ADVERTISEMENT

ಫ್ಯಾಕ್ಟ್‌ಚೆಕ್: ರಾಕೇಶ್ ಟಿಕಾಯತ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 17:09 IST
Last Updated 24 ಫೆಬ್ರುವರಿ 2021, 17:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಉತ್ತರಪ್ರದೇಶ-ದೆಹಲಿ ನಡುವಣ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಟೆಂಟ್‌ಗಳನ್ನು ಬಾಡಿಗೆಗೆ ನೀಡಲಾಗಿದೆ. ರೈತರ ಮುಖಂಡ ರಾಕೇಶ್ ಟಿಕಾಯತ್ ಅವರು, ಹಲವು ದಿನಗಳಿಂದ ಟೆಂಟ್‌ಗಳ ಬಾಡಿಗೆ ₹ 6 ಕೋಟಿ ನೀಡಿಲ್ಲ. ಹೀಗಾಗಿ ಡಕಾಯಿತ ರಾಕೇಶ್ ಟಿಕಾಯತ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಟೆಂಟ್‌ಗಳನ್ನು ಬಾಡಿಗೆಗೆ ನೀಡಿರುವವರಿಗೆ ಬಾಡಿಗೆ ನೀಡದೆ ವಂಚಿಸಲಾಗಿದೆ. ಹೀಗಾಗಿ ಅವರು ಎಫ್ಐಆರ್ ದಾಖಲಿಸಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ.

ಆದರೆ, ಈ ಪೋಸ್ಟ್‌ಗಳಲ್ಲಿ ಇರುವ ಮಾಹಿತಿ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್, ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಗಾಜಿಪುರ ಗಡಿಯಲ್ಲಿ 100 ಟೆಂಟ್‌ಗಳನ್ನು ಹಾಕಲಾಗಿದೆ. ಅವುಗಳನ್ನು ದಿನದ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಪ್ರತಿ ಟೆಂಟ್‌ಗೆ ಪ್ರತಿದಿನ ₹ 1,000 ಬಾಡಿಗೆ ಪಾವತಿಸಬೇಕು. ಜನವರಿ 26ರ ಹಿಂಸಾಚಾರದ ನಂತರ ರೈತರ ಪ್ರತಿಭಟನೆಗೆ ಬರುತ್ತಿರುವ ದೇಣಿಗೆ ಕಡಿಮೆಯಾಗಿದೆ’ ಎಂದು ದಿ ಹಿಂದೂ ಮತ್ತು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಗಳು ವರದಿ ಪ್ರಕಟಿಸಿವೆ. ಆದರೆ, ಟೆಂಟ್‌ಗಳ ಬಾಡಿಗೆ ನೀಡದೇ ಇರುವ ಕಾರಣಕ್ಕೆ ರಾಕೇಶ್ ಟಿಕಾಯತ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಉತ್ತರ ಪ್ರದೇಶ ಪೊಲೀಸರು ಸಹ ಇದನ್ನು ದೃಢಪಡಿಸಿದ್ದಾರೆ ಎಂದು ಲಾಜಿಕಲ್ ಇಂಡಿಯನ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT