ADVERTISEMENT

ಫ್ಯಾಕ್ಟ್‌ ಚೆಕ್‌ | ಲಾಕ್‌ಡೌನ್ ವೇಳೆ ಉಚಿತ ಇಂಟರ್ನೆಟ್, ಸಂದೇಶ ಸುಳ್ಳೆಂದ ಪಿಐಬಿ

​ಪ್ರಜಾವಾಣಿ ವಾರ್ತೆ
Published 8 ಮೇ 2020, 19:30 IST
Last Updated 8 ಮೇ 2020, 19:30 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಕೊರೊನಾ ಪಸರಿಸುವಿಕೆ ತಡೆಯಲು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಜನರಿಗೆ ಅನುಕೂಲವಾಗಲೆಂದು ಮೊಬೈಲ್ ಬಳಕೆದಾರರಿಗೆ ದೂರಸಂಪರ್ಕ ಸೇವಾ ಕಂಪನಿಗಳು ಉಚಿತ ಇಂಟರ್ನೆಟ್ ಸೌಲಭ್ಯ ಒದಗಿಸಲಿವೆ. ಇದನ್ನು ಪಡೆಯಲು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಲಿಂಕ್ ನೀಡಲಾಗಿದೆ. ಜಿಯೋ ಕಂಪನಿಯು ಫೇಸ್‌ಬುಕ್ ಜೊತೆಗೂಡಿ ಆರು ತಿಂಗಳು ಉಚಿತ ಇಂಟರ್ನೆಟ್ ನೀಡಲಿದೆ ಎಂಬ ಎಸ್‌ಎಸ್‌ಎಂ ಹಾಗೂ ವಾಟ್ಸ್ಆ್ಯಪ್‌ ಸಂದೇಶಗಳು ಹರಿದಾಡುತ್ತಿವೆ

ಆದರೆ ಉಚಿತ ಇಂಟರ್ನೆಟ್ ನೀಡುವ ಸಂದೇಶಗಳು ಸುಳ್ಳು ಎಂದು ಪಿಐಬಿ ಸ್ಪಷ್ಟಪಡಿಸಿದೆ. ಯಾವುದೇ ದೂರಸಂಪರ್ಕ ಕಂಪನಿಗಳ ವೆಬ್‌ಸೈಟ್‌ನಲ್ಲೂ ಇಂತಹ ಆಫರ್‌ಗಳು ಇಲ್ಲ. ‘ಫೇಸ್‌ಬುಕ್ ಜತೆ ಇಂತಹ ಯಾವುದೇ ಒಪ್ಪಂದ ಆಗಿಲ್ಲ. ಇಂತಹ ಯೋಜನೆ ಘೋಷಿಸಿಲ್ಲ’ ಎಂದು ಜಿಯೊ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT