‘ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೋವಿಡ್–19ರಿಂದಾಗಿ ಸತ್ತಿಲ್ಲ. ಮಾನವ ಶರೀರದೊಳಗೆ ಕೊರೊನಾ ವೈರಸ್ ಜೀವಂತವಾಗಿರಲು ಅದಕ್ಕೆ ಪ್ರಾಣಿಗಳ ಪ್ರೊಟೀನ್ ಅಗತ್ಯ. ಆದ್ದರಿಂದ ಮಾಂಸಾಹಾರಿಗಳಿಗೆ ಮಾತ್ರ ಈ ಸೋಂಕು ತಗಲುತ್ತದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೂ ದೃಢಪಡಿಸಿದೆ’ ಎಂಬ ಸುದ್ದಿ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈ ಸುದ್ದಿಗೆ ಹಲವು ಲೈಕ್ಗಳು ಬಂದಿರುವುದಲ್ಲದೆ, ಸಾವಿರಾರು ಬಾರಿ ಮರು ಟ್ವೀಟ್ ಆಗಿದೆ.
‘ಅಂಥ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಸಸ್ಯಾಹಾರಿಗಳು ಕೋವಿಡ್ನಿಂದಾಗಿ ಸತ್ತಿಲ್ಲ ಎಂಬುದಾಗಿ ಯಾವ ವರದಿಯಲ್ಲೂ ಹೇಳಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಾಣಿಗಳ ಮಾರಾಟ ಕೇಂದ್ರದಿಂದ ಈ ವೈರಸ್ ಪ್ರಸರಣ ಕಂಡಿದೆ ಎಂಬ ಕಾರಣಕ್ಕೆ ಈ ಸುದ್ದಿ ಹಬ್ಬಿಸಿರಬಹುದು ಎಂದು ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.