ADVERTISEMENT

Fact Check: ನೇತಾಜಿ ಚಿತ್ರ ಹೊಂದಿರುವ ₹500ರ ಹೊಸ ನೋಟು ಬಿಡುಗಡೆ; ಇದು ಸುಳ್ಳು

ಫ್ಯಾಕ್ಟ್ ಚೆಕ್
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
   

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರ ಹೊಂದಿರುವ 500 ನೋಟನ್ನು ಪ್ರದರ್ಶಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಚಿತ್ರವನ್ನು ಹಂಚಿಕೊಳ್ಳುತ್ತಿರುವ ಕೆಲವರು, ₹500ರ ಹೊಸ ನೋಟನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಹೊಸ ನೋಟುಗಳನ್ನು ಚಲಾವಣೆಗೆ ತರುವ ಜವಾಬ್ದಾರಿಯು ಭಾರತೀಯ ರಿಸರ್ವ್ ಬ್ಯಾಂಕ್‌ನದ್ದಾದರೆ, (ಆರ್‌ಬಿಐ), ನೋಟಿನ ವಿನ್ಯಾಸ ಮತ್ತಿತರ ಅಂಶಗಳನ್ನು ಅಖೈರುಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಸುಭಾಷ್ ಚಂದ್ರ ಬೋಸ್ ಅವರ ಚಿತ್ರ ಇರುವ ₹500 ನೋಟನ್ನು ವಿನ್ಯಾಸ ಮಾಡಿದ ಬಗ್ಗೆ ಆಗಲಿ, ಬಿಡುಗಡೆ ಮಾಡಿದ ಬಗ್ಗೆ ಆಗಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಯಾವುದೇ ಪ್ರಕಟಣೆ ನೀಡಿಲ್ಲ. ಚಿತ್ರದಲ್ಲಿರುವ ₹500 ನೋಟಿನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರ ಮೇಲೆ ‘ತಮಿಳು ಸಿನಿಮಾ ಫ್ಯಾನ್ಸ್ ಚಾನೆಲ್’ ಎನ್ನುವ ವಾಟರ್ ಮಾರ್ಕ್ ಇರುವುದು ಕಂಡಿತು. ಚಿತ್ರವನ್ನು ಹೈವ್ ಎಐ ಪತ್ತೆ ಸಾಧನದ ಮೂಲಕ ಪರಿಶೀಲಿಸಿದಾಗ, ಶೇ 99.9ರಷ್ಟು ಅದು ಎಐ ಚಿತ್ರ ಎನ್ನುವುದು ತಿಳಿಯಿತು. ಎಐನಿಂದ ರೂಪಿಸಲಾದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT