ADVERTISEMENT

ನಕ್ಸಲ್ ಕೊಬಾದ್ ವಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಮಾವೊವಾದಿ ಉಗ್ರರಿಗೆ ಮಾರ್ಗದರ್ಶನ ಮಾಡಿ ದೇಶದ್ರೋಹ ಮತ್ತು ದೇಶದ ವಿರುದ್ಧ ಯುದ್ಧ ಸಾರಿದ ಆಪಾದನೆಗಾಗಿ ವಿಚಾರಣೆ ನಡೆಸಬೇಕಿರುವುದರಿಂದ ಬಂಧನದಲ್ಲಿರುವ ನಕ್ಸಲ ಮುಖಂಡ ಕೊಬಾದ್ ಗಾಂಧಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಗುಜರಾತ್ ಪೊಲೀಸರು ದೆಹಲಿ ನ್ಯಾಯಾಲಯವನ್ನು ಕೋರಿದ್ದಾರೆ.

 ಗಾಂಧಿ ಮತ್ತು ಇತರ 20 ಮಂದಿಯ ವಿರುದ್ಧ ನಗರ ಪ್ರದೇಶಗಳಲ್ಲಿ ನಕ್ಸಲ ಚಟುವಟಿಕೆ ನಡೆಸಿದ ಆಪಾದನೆಗಾಗಿ ಪ್ರಕರಣ ದಾಖಲಾಗಿದೆ.ಆದ್ದರಿಂದ ಹೆಚ್ಚಿನ ವಿಚಾರಣೆಗಾಗಿ ತಮ್ಮ  ವಶಕ್ಕೆ ಒಪ್ಪಿಸಬೇಕು ಎಂದು ದೆಹಲಿ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ಅವರನ್ನು ಗುಜರಾತ್ ಪೊಲೀಸರು ಕೋರಿದ್ದಾರೆ.
ದೆಹಲಿ ಪೊಲೀಸರು 2009ರ ಸೆ.ನಲ್ಲಿ ಕೊಬಾದ್ ಗಾಂಧಿಯನ್ನು ಬಂಧಿಸಿದ ನಂತರ ಆತನನ್ನು ತಿಹಾರ್ ಜೈಲಿನಲ್ಲಿ ಬಂಧನದಲ್ಲಿ ಇಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.