ನವದೆಹಲಿ, (ಐಎಎನ್‌ಎಸ್): ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನಚರಿತ್ರೆ ಬರೆಯಲು ಅವರ ಪುತ್ರಿ ದಮನ್ ಸಿಂಗ್ ಅವರು ಭರದ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.
`ಇದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಆದರೆ ನಾನು ನನ್ನ ಹೆತ್ತವರ ಬಗ್ಗೆ ಅವರ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳ ಬಳಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ~ ಎಂದು ದಮನ್ ಹೇಳಿದ್ದಾರೆ.
ತಾವು ಬರೆಯಲಿರುವ ಜೀವನಚರಿತ್ರೆ ಲಘುವಾದ ಧಾಟಿಯಲ್ಲಿರುತ್ತದೆ. ಅದು ಕಚೇರಿಯ ಅಧಿಕೃತ ದಾಖಲೆಯಂತೆ ಇರಬೇಕೆಂದು ತಾವು ಬಯಸುವುದಿಲ್ಲ ಎಂದಿರುವ ದಮನ್, ತಂದೆಯ ಬಾಲ್ಯದ ಬಗೆಗಿನ ಮಾಹಿತಿಗಾಗಿ ಪಾಕಿಸ್ತಾನಕ್ಕೆ ಹೋಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.