ADVERTISEMENT

ಪ್ರಯಾಣ ಉದ್ದೇಶ: ಭಾರತದ ಕೋವಿಡ್‌ ಲಸಿಕಾ ಪ್ರಮಾಣಪತ್ರಕ್ಕೆ 108 ದೇಶಗಳ ಮಾನ್ಯತೆ

ಲೋಕಸಭೆಗೆ ಭಾರತಿ ಪ್ರವೀಣ್ ಪವಾರ್ ಮಾಹಿತಿ

ಪಿಟಿಐ
Published 10 ಡಿಸೆಂಬರ್ 2021, 12:57 IST
Last Updated 10 ಡಿಸೆಂಬರ್ 2021, 12:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಪ್ರಯಾಣದ ಉದ್ದೇಶಕ್ಕಾಗಿ ಒಟ್ಟು 108 ದೇಶಗಳು ಭಾರತದ ಕೋವಿಡ್-19 ಲಸಿಕೆ ಪ್ರಮಾಣಪತ್ರವನ್ನು ಅಂಗೀಕರಿಸಿವೆ’ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.

ಡಿ. 6ರವರೆಗೆ ಲಭ್ಯವಿರುವ ಮಾಹಿತಿಯನ್ನು ಹಂಚಿಕೊಂಡ ಅವರು, ‘ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಿಂದ ಪೀಡಿತ ಜನರಿಗೆ ಕೋವಿಡ್ ಲಸಿಕೆಯ ಉತ್ಪನ್ನಗಳ ಲಭ್ಯತೆಯನ್ನು ತ್ವರಿತಗೊಳಿಸುವುದುವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಪಟ್ಟಿಯ (ಇಯುಎಲ್) ಗುರಿಯಾಗಿದೆ. ಕೋವಿಡ್‌ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಿರ್ವಹಿಸಲು ದೇಶಗಳು ತಮ್ಮದೇ ಆದ ನಿಯಂತ್ರಕದ ಅನುಮೋದನೆಯನ್ನು ತ್ವರಿತಗೊಳಿಸಲು ಇದು ಅನುಮತಿಸುತ್ತದೆ’ ಎಂದು ಲಿಖಿತವಾಗಿ ಉತ್ತರಿಸಿದರು.

‘ವಿಶ್ವ ಆರೋಗ್ಯ ಸಂಸ್ಥೆಯ ಇಯುಎಲ್‌ ಅಡಿಯಲ್ಲಿ ಪಟ್ಟಿ ಮಾಡಲಾದ ಲಸಿಕೆಗಳನ್ನು ಪಡೆದ ವ್ಯಕ್ತಿಗಳಿಗೆ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು’ ಎಂದೂ ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.