ADVERTISEMENT

12,000 ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ತೊರೆದಿದ್ದಾರೆ: ವಿದೇಶಾಂಗ ಕಾರ್ಯದರ್ಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2022, 2:40 IST
Last Updated 3 ಮಾರ್ಚ್ 2022, 2:40 IST
ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ
ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ   

ನವದೆಹಲಿ: ಉಕ್ರೇನ್‌ನಲ್ಲಿದ್ದ ಒಟ್ಟು ಭಾರತೀಯ ವಿದ್ಯಾರ್ಥಿಗಳ ಪೈಕಿ 16 ಸಾವಿರದಷ್ಟು ಮಂದಿ ಆ ದೇಶವನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

ಸುದ್ದಿ ಸಂಸ್ಥೆ ‘ಎಎನ್‌ಐ‘ ಜೊತೆಗೆ ಮಾತನಾಡಿರುವ ಅವರು, ‘ ಉಕ್ರೇನ್‌ ತೊರೆಯುವಂತೆ ನಾವು ಮೊದಲ ಬಾರಿಗೆ ಸೂಚನೆ ನೀಡಿದಾಗ ಅಲ್ಲಿ ಅಂದಾಜು 20,000 ಭಾರತೀಯ ವಿದ್ಯಾರ್ಥಿಗಳಿದ್ದರು. ಆ ಪೈಕಿ 12,000 ಜನರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ. ಇದು ಉಕ್ರೇನ್‌ನಲ್ಲಿರುವ ಒಟ್ಟಾರೆ ಭಾರತೀಯ ನಾಗರಿಕರ ಪೈಕಿ ಶೇ 60ರಷ್ಟು’ ಎಂದು ಶೃಂಗ್ಲಾ ತಿಳಿಸಿದರು.

ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರು ಯುದ್ಧದ ಹಿನ್ನೆಲೆಯಲ್ಲಿ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ. ಅಲ್ಲಿಂದ, ಅವರನ್ನು ಏರ್‌ ಇಂಡಿಯಾ ಮತ್ತು ವಾಯುಪಡೆ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.

ಗುರುವಾರ ಬೆಳಗ್ಗೆ ಕೂಡ 208 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ C-17 ವಿಮಾನ ಪೋಲೆಂಡ್‌ನ ಜೆಸ್ಜೋವ್‌ನಿಂದ ದೆಹಲಿಯ ಬಳಿಯ ಹಿಂಡೆನ್‌ ವಾಯುನೆಲೆಗೆ ಬಂದಿಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.