ADVERTISEMENT

ಮೂರು ಹೈಕೋರ್ಟ್‌ಗಳ 13 ಹೆಚ್ಚುವರಿ ನ್ಯಾಯಮೂರ್ತಿಗಳು ಕಾಯಂ- ಮೇಘವಾಲ್

ಪಿಟಿಐ
Published 10 ಮಾರ್ಚ್ 2024, 16:02 IST
Last Updated 10 ಮಾರ್ಚ್ 2024, 16:02 IST
<div class="paragraphs"><p>ಅರ್ಜುನ್‌ ರಾಮ್ ಮೇಘವಾಲ್</p></div>

ಅರ್ಜುನ್‌ ರಾಮ್ ಮೇಘವಾಲ್

   

ನವದೆಹಲಿ: ಮೂರು ಹೈಕೋರ್ಟ್‌ಗಳ 13 ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಭಾನುವಾರ ಕಾಯಂ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿದೆ.

ಪಂಜಾಬ್‌, ಹರಿಯಾಣ ಹೈಕೋರ್ಟ್‌ನ 10 ಹೆಚ್ಚುವರಿ ನ್ಯಾಯಮೂರ್ತಿಗಳು ಸೇರಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ನ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಹಾಗೂ ಇದೇ ಹೈಕೋರ್ಟ್‌ನ ಮೂಲ ಹೊಂದಿರುವ ಒಬ್ಬರು ನ್ಯಾಯಮೂರ್ತಿಗೆ ಮಧ್ಯಪ್ರದೇಶ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ. 

ADVERTISEMENT

ಸಾಮಾಜಿಕ ಜಾಲತಾಣ ‘ಎಕ್ಸ್’ನ ತಮ್ಮ ಖಾತೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್ ಈ ಪದೋನ್ನತಿಯ ವಿಷಯವನ್ನು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.