ADVERTISEMENT

ಕೊರೊನಾ ವೈರಸ್ | ಚೀನಾದಲ್ಲಿ ಸಿಲುಕಿದ್ದ 15 ವಿದ್ಯಾರ್ಥಿಗಳು ಕೇರಳಕ್ಕೆ ವಾಪಸ್

ಏಜೆನ್ಸೀಸ್
Published 8 ಫೆಬ್ರುವರಿ 2020, 6:03 IST
Last Updated 8 ಫೆಬ್ರುವರಿ 2020, 6:03 IST
   

ಕೊಚ್ಚಿನ್‌:ಚೀನಾದ ಹುಬೇ ಪ್ರಾಂತ್ಯದಲ್ಲಿ ಸಿಲುಕಿದ್ದ ಕೇರಳದ 15 ವಿದ್ಯಾರ್ಥಿಗಳು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.

ಮೊದಲು ಯುನ್ನಾನ್‌ ಪ್ರಾಂತ್ಯದ ಕನ್ಮಿಂಗ್‌ ವಿಮಾನ ನಿಲ್ದಾಣದಿಂದ ಹಾಂಕ್‌ ಕಾಂಗ್‌ಗೆ ತೆರಳಿದ ವಿದ್ಯಾರ್ಥಿಗಳು, ಶುಕ್ರವಾರ ರಾತ್ರಿ 11ಕ್ಕೆ ಕೊಚ್ಚಿನ್‌ಗೆ ಬಂದರು. ತಕ್ಷಣಅವರನ್ನು ಕಲಮಶ್ಯೇರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಂಬಂಧಿಕರು ಆಗಮಿಸಿದರಾದರೂ ಸುರಕ್ಷತೆಯ ದೃಷ್ಠಿಯಿಂದ ಅದಕ್ಕೆ ಅವಕಾಶ ನೀಡಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.