ADVERTISEMENT

ಚಲಿಸುತ್ತಿದ್ದ ‘108 ಆಂಬುಲೆನ್ಸ್‌’ನಲ್ಲಿ 16ರ ಬಾಲಕಿ ಮೇಲೆ ಅತ್ಯಾಚಾರ

ಚಲಿಸುತ್ತಿದ್ದ 108 ಆಂಬುಲೆನ್ಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಪಿಟಿಐ
Published 29 ನವೆಂಬರ್ 2024, 6:02 IST
Last Updated 29 ನವೆಂಬರ್ 2024, 6:02 IST
<div class="paragraphs"><p>ಆಂಬುಲೆನ್ಸ್‌</p></div>

ಆಂಬುಲೆನ್ಸ್‌

   

ಮಾವುಗಂಜ್‌: ಚಲಿಸುತ್ತಿದ್ದ ಆಂಬುಲೆನ್ಸ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

‘108’ ತುರ್ತು ಸೇವೆಯ ಆಂಬುಲೆನ್ಸ್‌ನಲ್ಲಿ ನವೆಂಬರ್‌ 22ರಂದು ಘಟನೆ ನಡೆದಿದೆ ಎಂದು ಆರೋಪಿಸಿದ್ದು. ಪ್ರಕರಣ ಸಂಬಂಧ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸಂತ್ರಸ್ತೆಯು(16) ತನ್ನ ಅಕ್ಕ ಮತ್ತು ಬಾವನೊಂದಿಗೆ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸಿದ್ದರು(ಯಾರೂ ರೋಗಿಗಳಾಗಿರಲಿಲ್ಲ). ಅವರೊಂದಿಗೆ ಚಾಲಕ ಮತ್ತು ಆತನ ಸಹಚರನಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನೀರು ತರುವ ನೆಪದಲ್ಲಿ ಸಂತ್ರಸ್ತೆಯ ಅಕ್ಕ ಮತ್ತು ಬಾವ ದಾರಿ ಮಧ್ಯೆ ಆಂಬುಲೆನ್ಸ್‌ನಿಂದ ಇಳಿದಿದ್ದಾರೆ. ಅವರು ಮತ್ತೆ ವಾಹನ ಹತ್ತುವ ಮೊದಲೇ ಚಾಲಕ ಆಂಬುಲೆನ್ಸ್‌ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಚಾಲಕನ ಸಹಚರ ರಾಜೇಶ್‌ ಕೇವತ್‌ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ’ ಎಂದು ಹೇಳಿದ್ದಾರೆ.

‘ರಾತ್ರಿಯಿಡಿ ಬಾಲಕಿಯನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದ ಆರೋಪಿಗಳು ಮರುದಿನ ಬೆಳಿಗ್ಗೆ ಬಾಲಕಿಯನ್ನು ರಸ್ತೆ ಬದಿ ಎಸೆದು ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಮರಳಿದ್ದ ಸಂತ್ರಸ್ತೆಯ ಅಕ್ಕ ಮತ್ತು ಭಾವ ಆಕೆಯ ತಾಯಿಗೆ ಘಟನೆಯ ಬಗ್ಗೆ ತಿಳಿಸಿದ್ದರು. ಆದರೆ ಮರ್ಯಾದೆಗೆ ಅಂಜಿ ಅವರು ದೂರು ದಾಖಲಿಸಿರಲಿಲ್ಲ. ನ.25ರಂದು ಸಂತ್ರಸ್ತೆ ಮತ್ತು ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಡಿ ಸಂತ್ರಸ್ತೆಯ ಅಕ್ಕ ಮತ್ತು ಬಾವನನ್ನೂ ಆರೋಪಿಗಳೆಂದು ಪರಿಗಣಿಸಲಾಗಿದೆ. ಅವರು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.