ADVERTISEMENT

ನ.7ರಿಂದ 16ನೇ ಮುಂಬೈ ಸಾಹಿತ್ಯ ಉತ್ಸವ: ಡಿ.ವೈಚಂದ್ರಚೂಡ್‌, ಶಶಿ ತರೂರ್‌ ಭಾಗಿ

ಪಿಟಿಐ
Published 5 ನವೆಂಬರ್ 2025, 14:15 IST
Last Updated 5 ನವೆಂಬರ್ 2025, 14:15 IST
   

ಮುಂಬೈ: 16ನೇ ಮುಂಬೈ ಸಾಹಿತ್ಯ ಉತ್ಸವದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಲೇಖಕ ವಿನೋದ್‌ ಕುಮಾರ್‌ ಶುಕ್ಲಾ, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖ ಲೇಖಕರು, ಚಿಂತಕರು, ವಿದ್ವಾಂಸರು ಮತ್ತು ಕಲಾವಿದರು ಭಾಗಿಯಾಗಲಿದ್ದಾರೆ.

ರಾಷ್ಟ್ರೀಯ ಪ್ರದರ್ಶನ ಕಲಾ ಕೇಂದ್ರದಲ್ಲಿ (ಎನ್‌ಸಿಪಿಎ) ನವೆಂಬರ್‌ 7ರಂದು ಸಾಹಿತ್ಯ ಉತ್ಸವ ಆರಂಭವಾಗಲಿದೆ. ಗೋದ್ರೆಜ್‌ ಇಂಡಸ್ಟ್ರೀಸ್ ಗ್ರೂಪ್‌ ಸಹಯೋಗದಲ್ಲಿ ಆಯೋಜಿಸಿರುವ ಈ ಸಾಹಿತ್ಯ ಉತ್ಸವವು, 10ಕ್ಕೂ ಹೆಚ್ಚು ದೇಶಗಳ ವಿಭಿನ್ನ ಸಾಹಿತ್ಯಿಕ ಧ್ವನಿ, ನೋಟಗಳು ಮತ್ತು ವಿಚಾರಧಾರೆಗಳಿಗೆ ವೇದಿಕೆ ಆಗಲಿದೆ . 

ಮೂರು ದಿನ ನಡೆಯುವ ಉತ್ಸವದಲ್ಲಿ ಕಾದಂಬರಿ, ಕವಿತೆ, ಆರೋಗ್ಯ, ಇತಿಹಾಸ, ವ್ಯವಹಾರ, ವಿಜ್ಞಾನ, ತತ್ವಶಾಸ್ತ್ರ ಮತ್ತು ಮುಂಬೈ ನಗರದ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.