ADVERTISEMENT

ಬಿಹಾರಕ್ಕೆ ಬಿಜೆಪಿ ಪ್ರಣಾಳಿಕೆ| ಪ್ರತಿಯೊಬ್ಬರಿಗೂ ಲಸಿಕೆ, 19 ಲಕ್ಷ ಮಂದಿಗೆ ನೌಕರಿ

ಏಜೆನ್ಸೀಸ್
Published 22 ಅಕ್ಟೋಬರ್ 2020, 8:10 IST
Last Updated 22 ಅಕ್ಟೋಬರ್ 2020, 8:10 IST
ಬಿಹಾರದ ಪಟ್ನಾದಲ್ಲಿ ಗುರುವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಬಿಹಾರದ ಪಟ್ನಾದಲ್ಲಿ ಗುರುವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಹಣಕಾಸು ಸಚಿವೆ, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್‌ ಅವರು ಪಟ್ನಾದಲ್ಲಿ ಗುರುವಾರ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು.

ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೋವಿಡ್-19 ಲಸಿಕೆ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ. ಅಲ್ಲದೆ, ಬಿಹಾರದ 19 ಲಕ್ಷ ಜನರಿಗೆ ಉದ್ಯೋಗ ನೀಡುವ ಆಶ್ವಾಸನೆಯನ್ನೂ ಬಿಜೆಪಿ ಪ್ರಣಾಳಿಕೆ ಒಳಗೊಂಡಿದೆ.

‘ಬಿಹಾರವು ರಾಜಕೀಯವಾಗಿ ಸೂಕ್ಷ್ಮಮತಿಗಳನ್ನು ಮತ್ತು ಸುಶಿಕ್ಷಿತರನ್ನು ಒಳಗೊಂಡ ರಾಜ್ಯವಾಗಿದೆ. ಪಕ್ಷಗಳು ನೀಡುವ ನೀಡುವ ಭರವಸೆಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಅಲ್ಲದೆ, ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ನಮ್ಮ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ನಮ್ಮ ಪ್ರಣಾಳಿಕೆ ಬಗ್ಗೆ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ, ನಾವು ಅವರಿಗೆ ವಿಶ್ವಾಸದಿಂದ ಉತ್ತರ ನೀಡುತ್ತೇವೆ,’ ಎಂದು ನಿರ್ಮಲಾ ಸೀತಾರಾಮನ್‌ ಪ್ರಣಾಳಿಕೆ ಬಿಡುಗಡೆ ಮಾಡುತ್ತಾ ಹೇಳಿದರು.

ADVERTISEMENT

ಎನ್‌ಡಿಎ ಅಧಿಕಾರವಧಿಯಲ್ಲಿ ಬಿಹಾರದ ಜಿಡಿಪಿ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದ ಜಿಡಿಪಿ ಶೇ.3 ರಿಂದ 11.3 ಕ್ಕೆ ಏರಿದೆ. ಅದು ಎನ್‌ಡಿಎ ಅವಧಿಯಲ್ಲಾಗಿದ್ದೇ ಹೊರತು, 15 ವರ್ಷಗಳ ‘ಜಂಗಲ್ ರಾಜ್’ ಆಡಳಿತದಲ್ಲಿ ಅಲ್ಲ ಎಂದು ನಿರ್ಮಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.