ADVERTISEMENT

ಹಳಿತಪ್ಪಿದ ಚೆನ್ನೈ - ಮಂಗಳೂರು ಸೂಪರ್ ಫಾಸ್ಟ್ ರೈಲು 

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 7:53 IST
Last Updated 26 ಫೆಬ್ರುವರಿ 2019, 7:53 IST
   

ಶೊರ್ನೂರ್: ಚೆನ್ನೈನಿಂದ ಮಂಗಳೂರಿಗೆ ಬರುತ್ತಿದ್ದ ಸೂಪರ್ ಫಾಸ್ಟ್ ರೈಲು (12601) ಶೊರ್ನೂರ್ ರೈಲ್ವೇ ನಿಲ್ದಾಣದ ಬಳಿ ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ.ಯಾರಿಗೂ ಗಂಭೀರ ಗಾಯಗಳಾಗಿಲ್ಲ.

ಪಾಲಕ್ಕಾಡ್‍ನಿಂದ ಶೊರ್ನೂರ್ ರೈಲು ನಿಲ್ದಾಣಕ್ಕೆ ಪ್ರವೇಶಿಸುವ ಭಾಗದ ಸಮೀಪ ರೈಲು ಹಳಿ ತಪ್ಪಿದೆ.ಶೊರ್ನೂರ್ ದಾರಿಯಾಗಿ ಸಾಗುವ ಎಲ್ಲ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ್ದು,ಆನಂತರ ಕೆಲವು ರೈಲುಗಳು ಸಂಚಾರ ಆರಂಭಿಸಿದೆ.

ಎಂಜಿನ್ ಹಿಂದಿರುವ ಪಾರ್ಸಲ್ ವ್ಯಾನ್ ಮತ್ತು ಎಸ್.ಎಲ್. ಆರ್. ಬೋಗಿಗಳು ಸಂಪೂರ್ಣವಾಗಿ ಹಳಿ ತಪ್ಪಿದೆ . ಹಳಿ ಬಳಿ ಇದ್ದ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ADVERTISEMENT

ಶೊರ್ನೂರ್‌ನಿಂದ ಕೋಯಿಕ್ಕೋಡ್, ತ್ರಿಶ್ಶೂರ್ ಮತ್ತು ಪಾಲಕ್ಕಾಡ್ ಕಡೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ತ್ರಿಶ್ಶೂರ್ - ಪಾಲಕ್ಕಾಡ್ ದಾರಿಯಾಗಿ ಸಾಗುವ ರೈಲುಗಳ ಸಂಚಾರಕ್ಕೆ ಧಕ್ಕೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.