ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಇಬ್ಬರಿಗೆ ಶಿಕ್ಷೆ

ಪಿಟಿಐ
Published 18 ಜನವರಿ 2020, 20:02 IST
Last Updated 18 ಜನವರಿ 2020, 20:02 IST

ನವದೆಹಲಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಅಪರಾಧಿಗಳನ್ನು ಪೋಕ್ಸೊ ನ್ಯಾಯಾಲಯ ಶನಿವಾರ ಶಿಕ್ಷೆಗೆ ಗುರಿಪಡಿಸಿದೆ. ಇದೇ 30 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

2013ರ ಏಪ್ರಿಲ್‌ 15 ರಂದು ಪೂರ್ವ ದೆಹಲಿಯ ಗಾಂಧಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ನರೇಶ್‌ ಕುಮಾರ್‌ ಮಲ್ಹೋತ್ರಾ ಅವರು, ಅಪರಾಧಿಗಳಾದ ಮನೋಜ್‌ ಶಾ ಮತ್ತು ಪ್ರದೀಪ್‌ ಕುಮಾರ್‌ ಅವರನ್ನು ಶಿಕ್ಷೆಗೊಳಪಡಿಸಿದ್ದಾರೆ.

ADVERTISEMENT

‘ವಿಚಾರಣೆಯು ಎರಡು ವರ್ಷಗಳಲ್ಲಿ ಪೂರ್ಣಗೊಂಡರೂ ಆರು ವರ್ಷಗಳ ನಂತರ ನಮಗೆ ನ್ಯಾಯ ದೊರೆತಿರುವುದು ಸಂತೋಷವಾಗಿದೆ. ನನ್ನ ಮಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ’ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು 2013ರಲ್ಲಿಯೇ ಬಂಧಿಸಲಾಗಿತ್ತು. ಅದೇ ವರ್ಷದ ಮೇ 24 ರಂದು ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು.

ಹಲ್ಲೆ: ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳಲ್ಲೊಬ್ಬ ಮಾಧ್ಯಮದ ಕೆಲವರ ಮೇಲೆ ಶನಿವಾರ ಹಲ್ಲೆ ನಡೆಸಿದ್ದಾನೆ. ಅಪರಾಧಿ ಮನೋಜ್‌ ಶಾ, ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಂತೆ ಹಿರಿಯ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶ ನರೇಶ್‌ ಕುಮಾರ್‌ ಮಲ್ಹೋತ್ರಾ ಅವರು, ಈ ಕುರಿತು ಲಿಖಿತ ದೂರು ನಿಡುವಂತೆ ಹಿರಿಯ ಮಹಿಳಾ ವರದಿಗಾರರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.