ADVERTISEMENT

ಕಾಶ್ಮೀರದಲ್ಲಿ ಎನ್‍ಕೌಂಟರ್: ಇಬ್ಬರು ಉಗ್ರರು ಬಲಿ

ಪಿಟಿಐ
Published 24 ಜೂನ್ 2018, 14:28 IST
Last Updated 24 ಜೂನ್ 2018, 14:28 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಶ್ರೀನಗರ : ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ನಡೆಸಿದ ಎನ್‌ಕೌಂಟರ್‌ಗೆ ಲಷ್ಕರ್‌ ಎ ತಯಬಾ ವಿಭಾಗೀಯ ಕಮಾಂಡರ್‌ ಶಕೂರ್‌ ದಾರ್‌ ಸೇರಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇನ್ನೊಬ್ಬ ಶರಣಾಗಿದ್ದಾನೆ.

ಹತ್ಯೆಗೀಡಾದ ಇನ್ನೊಬ್ಬ ಉಗ್ರ ಪಾಕಿಸ್ತಾನ ಪ್ರಜೆ ಹೈದರ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್‌ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

‘ಕುಲ್ಗಾಂನ ಚೆದರ್‌ ಬನ್‌ ಪ್ರದೇಶದ ಮನೆಯೊಂದರಲ್ಲಿ ಉಗ್ರರು ಅವಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಮನೆಯನ್ನು ಸುತ್ತುವರಿದಾಗ ಗುಂಡಿನ ಚಕಮಕಿ ನಡೆದಿದೆ ಈ ವೇಳೆ ಉಗ್ರರು ಹತರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶರಣಾಗಿರುವ ಉಗ್ರ ಇತ್ತೀಚೆಗಷ್ಟೆ ಭಯೋತ್ಪಾದಕ ಸಂಘಟನೆಗೆ ಸೇರಿದ್ದ’ ಎಂದು ಐಜಿಪಿ ಸ್ವಯಂಪ್ರಕಾಶ್‌ ಪನಿ ಹೇಳಿದ್ದಾರೆ.

‘ಹತ್ಯೆಗಿಡಾಗಿರುವ ಕಮಾಂಡರ್‌ ಶಕೂರ್‌ ದಾರ್‌ ಕುಲ್ಗಾಂನ ಸೊಪತ್‌ ಟೆಂಗ್‌ಪೋರಾ ನಿವಾಸಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕಾಶ್ಮೀರದ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದಿದ್ದಾರೆ.

ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.