ಇಂಫಾಲ: ‘ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಮತ್ತು ರಾಜ್ಯವನ್ನು ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಜನರಿಂದ ಚುನಾಯಿತವಾಗಿದ್ದ ಸರ್ಕಾರವನ್ನೇ ಪುನಃ ಸ್ಥಾಪಿಸಿ’ ಎಂದು ಕೋರಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ 21 ಶಾಸಕರು ಪ್ರಧಾನಿ ನರೇಂದ್ರ ಮೋದಿ ಮತ್ತ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿಯ 14, ಎನ್‌ಪಿಪಿ ಪಕ್ಷದ 3, ನಾಗಾ ಪೀಪಲ್ಸ್ ಫ್ರಂಟ್‌ನ 2 ಮತ್ತು ಇಬ್ಬರು ಪಕ್ಷೇತರ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ. ಕುಕಿ ಮತ್ತು ಜೊ ಬುಡಕಟ್ಟು ಸಮುದಾಯಗಳ ಶಾಸಕರು ಈ ಎಲ್ಲ ಬೆಳವಣಿಗಳಿಂದ ದೂರ ಉಳಿದಿದ್ದಾರೆ. ಪತ್ರವನ್ನು ಏ.10ರಂದು ಬರೆಯಲಾಗಿದೆ. ಆದರೆ, ಅದು ಏ.29ರಂದು ಗೃಹಸಚಿವಾಲಯಕ್ಕೆ ತಲುಪಿದೆ.
ಮುಖ್ಯಮಂತ್ರಿಯಾಗಿದ್ದ ಎನ್. ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರವು ಇದೇ ಫೆ.13ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿತ್ತು. ಬಿರೇನ್ ಸಿಂಗ್ ಸರ್ಕಾರದ ಅವಧಿಯು 2027ರವರೆಗೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.