ಬೀಜಿಂಗ್: ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-14 ಗಗನ ನೌಕೆಯಲ್ಲಿ ಭಾನುವಾರ ಭೂಮಿಗೆ ಸುರಕ್ಷಿತರಾಗಿ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಗನಯಾತ್ರಿಗಳಿದ್ದ ಗಗನ ನೌಕೆಯು ಡಾಂಗ್ಫೆಂಗ್ ನೆಲೆಗೆ ಬಂದಿಳಿದಿದೆ. ಈ ಮೂವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದ ಕಾಮಗಾರಿಗಾಗಿ 183 ದಿನಗಳ ಕಾಲ ಅಲ್ಲಿ ನೆಲೆಸಿದ್ದರು ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.