ADVERTISEMENT

ಜಮ್ಮು: ಕಮರಿಗೆ ಉರುಳಿದ ವಾಹನ, 4 ಮಂದಿ ಸಾವು

ಪಿಟಿಐ
Published 5 ಜುಲೈ 2023, 4:33 IST
Last Updated 5 ಜುಲೈ 2023, 4:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ವಾಹನ ಕಮರಿಗೆ ಉರುಳಿ ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬುಧವಾರ ಮುಂಜಾನೆ ಥಾನಮಂಡಿ-ಭಾಂಗೈ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ವಾಹನ ಸ್ಕಿಡ್ ಆಗಿ ಆಳವಾದ ಕಮರಿಗೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಭಾಂಗೈ ನಿವಾಸಿಗಳಾದ ಶಮೀಮ್ ಅಖ್ತರ್ (55), ರುಬಿನಾ ಕೌಸರ್ (35), ಜರೀನಾ ಬೇಗಂ ಮತ್ತು ಮೊಹಮ್ಮದ್ ಯೂನಿಸ್ (38) ಎಂದು ಗುರುತಿಸಲಾಗಿದೆ.

ADVERTISEMENT

ವಾಹನದಲ್ಲಿ 12 ಮಂದಿ ಇದ್ದರು. ಸ್ಥಳೀಯರು ಹಾಗೂ ಪೊಲೀಸರು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.