ADVERTISEMENT

ಛತ್ತೀಸಗಢದ ಬಿಜಾಪುರದಲ್ಲಿ ನಕ್ಸಲರು ಹುದುಗಿಸಿದ್ದ 45 ಕೆ.ಜಿ ಐಇಡಿ ಪತ್ತೆ

ಪಿಟಿಐ
Published 28 ಮಾರ್ಚ್ 2025, 7:18 IST
Last Updated 28 ಮಾರ್ಚ್ 2025, 7:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿದ್ದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಶುಕ್ರವಾರ ಭದ್ರತಾ ಪಡೆಗಳು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

45 ಕೆ.ಜಿ ತೂಕದ ಸ್ಫೋಟಕ ಸಾಧನವು ಮಿನಿ ಟ್ರಕ್ ಅನ್ನು ಸ್ಫೋಟಿಸುವಷ್ಟು ಶಕ್ತಿಶಾಲಿಯಾಗಿದ್ದು, 15 ಅಡಿ ಆಳದ ಕುಳಿಯನ್ನು ಮಾಡಿಬಿಡುವಷ್ಟು ಪ್ರಬಲವಾಗಿತ್ತು ಎಂದು ಅವರು ಹೇಳಿದ್ದಾರೆ.

ADVERTISEMENT

ಚೆರ್ಪಾಲ್-ಪಲ್ನಾರ್ ರಸ್ತೆಯ ಕೆಳಗೆ ಹುದುಗಿಸಲಾಗಿದ್ದ ಐಇಡಿಯನ್ನು ಬೆಳಿಗ್ಗೆ ಗಂಗಲೂರು ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾರ್ಯಾಚರಣೆಯ ನಂತರ ಹಿಂತಿರುಗುತ್ತಿದ್ದಾಗ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 222ನೇ ಬೆಟಾಲಿಯನ್‌ನ ತಂಡವು ಪತ್ತೆಹಚ್ಚಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಐಇಡಿ ಕಮಾಂಡ್ ಸ್ವಿಚ್ ಕಾರ್ಯವಿಧಾನವನ್ನು ಹೊಂದಿತ್ತು, ಇದು ನಕ್ಸಲರು ಬಳಸುವ ಸಾಮಾನ್ಯ ತಂತ್ರವಾಗಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಲು ಇದನ್ನು ಹುದುಗಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಮೂಲಕ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.

ಐಇಡಿ ಯಾವಾಗ ಸ್ಫೋಟಗೊಳ್ಳಬೇಕು ಎಂಬುದನ್ನು ನಿಯಂತ್ರಿಸಲು ಕಮಾಂಡ್ ಸ್ವಿಚ್ ಕಾರ್ಯವಿಧಾನವು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.