ADVERTISEMENT

ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಿಂದ 5 ಲಕ್ಷ ಲಾಡು ಅಯೋಧ್ಯೆಗೆ

ಪಿಟಿಐ
Published 22 ಜನವರಿ 2024, 4:31 IST
Last Updated 22 ಜನವರಿ 2024, 4:31 IST
<div class="paragraphs"><p>ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾಗಿರುವ ರಾಮಮಂದಿರ</p></div>

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾಗಿರುವ ರಾಮಮಂದಿರ

   

ಪಿಟಿಐ ಚಿತ್ರ

ಭೋಪಾಲ್: ಅಯೋಧ್ಯೆಯಲ್ಲಿ ಇಂದು (ಸೋಮವಾರ) ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಿಂದ 5 ಲಕ್ಷ ಲಾಡುಗಳುನ್ನು ಪೂರೈಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ರಾಮಮಂದಿರ ಉದ್ಘಾಟನೆಗೆ ಆಗಮಿಸುವ ಭಕ್ತಾದಿಗಳಿಗೆ ಹಂಚಲು ಈ ಲಾಡುಗಳನ್ನು ನೀಡಲಾಗುತ್ತಿದ್ದು, ಪ್ರತಿ ಲಾಡು 50 ಗ್ರಾಂ ಇರಲಿದೆ ಎಂದು ಮಹಾಕಾಳೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮೂಲಚಂದ್ ಜುನ್ವಾಲ್ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಲಾಡುಗಳನ್ನು ಹೊತ್ತ ಐದು ಟ್ರಕ್‌ಗಳು ಭಾನುವಾರವೇ ಅಯೋಧ್ಯೆಗೆ ತಲುಪಿವೆ ಎಂದು ಮೂಲಚಂದ್ ಹೇಳಿದ್ದಾರೆ.

ಸುಮಾರು 150 ಮಂದಿ ಲಾಡು ತಯಾರಿಕೆಯಲ್ಲಿ ಕೆಲಸ ಮಾಡಿದ್ದರು. ಇದಕ್ಕೆ ದೇವಾಲಯದ ಸಿಬ್ಬಂದಿ ಸಹ ಕೈ ಜೋಡಿಸಿದ್ದರು. ಐದು ದಿನಗಳ ಕಾಲ ಲಾಡುಗಳನ್ನು ತಯಾರಿಸಲಾಯಿತು ಎಂದು ಮೂಲಚಂದ್ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.