ಹೈದರಾಬಾದ್: ಇಲ್ಲಿನ ಶಾಲೆಯೊಂದರಲ್ಲಿಐದು ವರ್ಷದ ಬಾಲಕಿ ಮೇಲೆಸಿಬ್ಬಂದಿಯೇ ಅತ್ಯಾಚಾರವೆಸಗಿರುವ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿರುವ ಗೋಲ್ಕಂಡಾ ಪೊಲೀಸರು,‘ಆರೋಪಿಯು ಚಾಕೋಲೆಟ್ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ’ ಎಂದುತಿಳಿಸಿದ್ದಾರೆ.
‘ಎಲ್ಕೆಜಿ ಓದುತ್ತಿರುವ ಐದು ವರ್ಷದ ಬಾಲಕಿಯ ಪೋಷಕರು ನಿನ್ನೆ (ಶನಿವಾರ) ಠಾಣೆಗೆ ಬಂದು ಘಟನೆ ಸಂಬಂಧ ದೂರು ನೀಡಿದ್ದರು.ಆರೋಪಿಯನ್ನು ಬಂಧಿಸಿದ್ದು,ಭಾರತೀಯ ದಂಡ ನೀತಿ ಸಂಹಿತೆ(ಐಪಿಸಿ)ಯ ಪೊಕ್ಸೋ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಆಕ್ರೋಶಗೊಂಡ ಸ್ಥಳೀಯರು ಶಾಲೆಯ ಆಸ್ತಿ ಹಾನಿಗೊಳಿಸಿದ್ದಾರೆ. ಸದ್ಯಪರಿಸ್ಥಿತಿ ನಿಯಂತ್ರಣದಲ್ಲಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.