ADVERTISEMENT

ಕೇಂದ್ರ ಸಶಸ್ತ್ರ ಪಡೆಗಳಲ್ಲಿ 84,866 ಹುದ್ದೆ ಖಾಲಿ ಇವೆ: ನಿತ್ಯಾನಂದ ರೈ

ಪಿಟಿಐ
Published 15 ಮಾರ್ಚ್ 2023, 13:40 IST
Last Updated 15 ಮಾರ್ಚ್ 2023, 13:40 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ‘ಸಿಆರ್‌ಪಿಎಫ್‌ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಿಗಾಗಿ (ಸಿಎಪಿಎಫ್‌) ಮಂಜೂರಾದ ಒಟ್ಟು 10,05,520 ಹುದ್ದೆಗಳ ಪೈಕಿ 84,866 ಹುದ್ದೆಗಳು ಖಾಲಿ ಇವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.

ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಿಎಪಿಎಫ್‌ ಹುದ್ದೆಗಳಿಗಾಗಿ ಕಳೆದ ಐದು ತಿಂಗಳಲ್ಲಿ 31,785 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ’ ಎಂದೂ ಅವರು ಹೇಳಿದರು.

‘ನಿವೃತ್ತಿ, ರಾಜೀನಾಮೆ, ಬಡ್ತಿ, ಸಾವು, ಹೊಸ ಬೆಟಾಲಿಯನ್‌ಗಳ ಸ್ಥಾಪನೆ, ಹೊಸ ಹುದ್ದೆಗಳ ರಚನೆ ಹಾಗೂ ಇತರ ಕಾರಣಗಳಿಂದಾಗಿ ಸಿಎಪಿಎಫ್‌ನ ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗಿದೆ’ ಎಂದರು.

ADVERTISEMENT

‘ಈ ವರ್ಷದ ಜನವರಿ 1ರಂತೆ, ಸಿಆರ್‌ಪಿಎಫ್‌ನಲ್ಲಿ 29,283, ಬಿಎಸ್‌ಎಫ್‌ನಲ್ಲಿ 19,987, ಸಿಐಎಸ್‌ಎಫ್‌ 19,475, ಎಸ್‌ಎಸ್‌ಬಿಯಲ್ಲಿ 8,273, ಐಟಿಪಿಬಿಯಲ್ಲಿ 4,142 ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ 3,706 ಹುದ್ದೆಗಳು ಖಾಲಿ ಇವೆ. ಅಲ್ಲದೇ, 247 ವೈದ್ಯ ಹುದ್ದೆಗಳು ಹಾಗೂ 2,354 ನರ್ಸ್‌ ಹುದ್ದೆಗಳೂ ಸಹ ಸಿಎಪಿಎಫ್‌ನಲ್ಲಿ ಖಾಲಿ ಇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.