ADVERTISEMENT

ಮರುಬಳಕೆ ವಸ್ತುಗಳಿಂದ 14 ಅಡಿ ಎತ್ತರದ ಮೋದಿ ಪ್ರತಿಮೆ: ಬೆಂಗಳೂರಿನಲ್ಲಿ ಸ್ಥಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 9:03 IST
Last Updated 15 ಸೆಪ್ಟೆಂಬರ್ 2021, 9:03 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)   

ಗುಂಟೂರು: ಆಂಧ್ರ ಪ್ರದೇಶದಲ್ಲಿ ಮರುಬಳಕೆಯ ಸಾಧನಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

ಗುಂಟೂರಿನ ತೆನಾಲಿಯ ವೆಂಕಟೇಶ್ವರ ರಾವ್ ಮತ್ತು ಅವರ ಪುತ್ರ ರವಿ ಎಂಬವರ ನೇತೃತ್ವದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

10ರಿಂದ 15 ಮಂದಿ 2 ತಿಂಗಳುಗಳ ಕಾಲ ಪ್ರತಿಮೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ವೆಂಕಟೇಶ್ವರ ರಾವ್ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ಆಟೊಮೊಬೈಲ್ ಕಂಪನಿಗಳು ರದ್ದಿಗೆ ಹಾಕಿದ್ದ ವಸ್ತುಗಳನ್ನು ಬಳಸಿಕೊಂಡು ಪ್ರತಿಮೆ ನಿರ್ಮಿಸಲಾಗಿದೆ. ಹೈದರಾಬಾದ್, ವಿಶಾಖಪಟ್ಟಣ, ಚೆನ್ನೈ ಮತ್ತು ಗುಂಟೂರಿನ ರದ್ದಿ ಮಾರುಕಟ್ಟೆಗಳಿಂದ ಪ್ರತಿಮೆ ನಿರ್ಮಾಣಕ್ಕೆ ವಸ್ತುಗಳನ್ನು ತರಿಸಿಕೊಳ್ಳಲಾಗಿತ್ತು. ಇದರಲ್ಲಿ ಲೋಹದ ಚೈನ್‌ಗಳು, ಚಕ್ರಗಳು, ನಟ್, ಬೋಲ್ಟ್ ಇತ್ಯಾದಿಗಳು ಸೇರಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.