ADVERTISEMENT

ಕಸಬ್‌ಗೂ ಇಷ್ಟು ಭದ್ರತೆ ಇರಲಿಲ್ಲ: ಬಂಡಾಯ ಶಾಸಕರ ಭದ್ರತೆ ಕುರಿತು ಠಾಕ್ರೆ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2022, 7:18 IST
Last Updated 3 ಜುಲೈ 2022, 7:18 IST
ಗುವಾಹಟಿಯಲ್ಲಿ ಶಿವಸೇನಾ ಬಂಡಾಯ ಶಾಸಕರು ತಂಗಿದ್ದ ಹೊಟೇಲ್‌ಗೆ ಒದಗಿಸಲಾಗಿದ್ದ ಭದ್ರತೆ
ಗುವಾಹಟಿಯಲ್ಲಿ ಶಿವಸೇನಾ ಬಂಡಾಯ ಶಾಸಕರು ತಂಗಿದ್ದ ಹೊಟೇಲ್‌ಗೆ ಒದಗಿಸಲಾಗಿದ್ದ ಭದ್ರತೆ   

ಮುಂಬೈ: ಶಿವಸೇನಾ ಬಂಡಾಯ ಶಾಸಕರಿಗೆ ಒದಗಿಸಿರುವ ಭಾರೀ ಭದ್ರತೆಯ ಕುರಿತು ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಮುಂಬೈನ ಐಷಾರಾಮಿ ಹೊಟೇಲ್‌ನಿಂದ ವಿಧಾನ ಭವನದ ಆವರಣಕ್ಕೆ ಭಾರೀ ಭದ್ರತೆಯಲ್ಲಿ ಶಿವಸೇನಾ ಬಂಡಾಯ ಶಾಸಕರು ಭಾನುವಾರ ಬಂದಿಳಿದಿದ್ದಾರೆ.

ಬಂಡಾಯ ಶಾಸಕರಿಗೆ ನೀಡಿರುವ ಭದ್ರತಾ ವ್ಯವಸ್ಥೆ ವಿಚಾರವಾಗಿ ಏಕನಾಥಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

‘ಮುಂಬೈನಲ್ಲಿ ನಾವು ಈ ಹಿಂದೆ ಇಂತಹ ಭದ್ರತೆಯನ್ನೇ ನೋಡಿರಲಿಲ್ಲ. ಭಯೋತ್ಪಾದಕ ಅಜ್ಮಲ್‌ ಕಸಬ್‌ಗೂ ಈ ರೀತಿಯ ಭದ್ರತೆ ನೀಡಿರಲಿಲ್ಲ. ನಿಮಗೇಕೆ ಇಷ್ಟೊಂದು ಭಯ?’ ಎಂದು ಶಿಂಧೆಗೆ ಪ್ರಶ್ನಿಸಿದ್ದಾರೆ.

ಶಿವಸೇನಾ ಬಂಡಾಯ ಬಣ ಹಾಗೂ ಬಿಜೆಪಿ ಮೈತ್ರಿ ಸರ್ಕಾರವು ಜುಲೈ 4 ರಂದು ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಮಾಡಲಿದೆ.

ADVERTISEMENT

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಆಗಿ ಬಿಜೆಪಿಯ ರಾಹುಲ್‌ ನರ್ವೇಕರ್‌ ಆಯ್ಕೆಯಾಗಿದ್ದು, ಸೋಮವಾರದ ವಿಶ್ವಾಸ ಮತಕ್ಕೂ ಮೊದಲು ಏಕನಾಥ ಶಿಂಧೆ–ಬಿಜೆಪಿ ದೋಸ್ತಿಗೆ ಮೊದಲ ಗೆಲುವು ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.