ಅರವಿಂದ ಕೇಜ್ರಿವಾಲ್
ಪಿಟಿಐ
ಚಂಡೀಗಢ(ಪಂಜಾಬ್): ಲುಧಿಯಾನ ಪಶ್ಚಿಮ ಕ್ಷೇತ್ರ ಉಪಚುನಾವಣೆಗೆ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಅಭ್ಯರ್ಥಿಯಾಗಿ ಎಎಪಿ ಘೋಷಿಸಿದ್ದು, ಅರೋರ ಅವರ ಸ್ಥಾನವನ್ನು ಅರವಿಂದ ಕೇಜ್ರಿವಾಲ್ ಅವರು ಅಲಂಕರಿಸುವ ಸಾಧ್ಯತೆಯಿದೆ ಎಂಬ ಅನುಮಾನವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ.
ಕಳೆದ ತಿಂಗಳು ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನದಿಂದಾಗಿ ತೆರವಾದ ಲುಧಿಯಾನ ಪಶ್ಚಿಮ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಎಎಪಿ ಅಭ್ಯರ್ಥಿ ಘೋಷಿಸಿದೆ.
ಫೆಬ್ರುವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ಅವರು ವಿರುದ್ಧ ಕೇಜ್ರಿವಾಲ್ ಸೋತಿದ್ದರು.
ಲುಧಿಯಾನ ಉಪ ಚುನಾವಣೆಗೆ ಎಎಪಿ ಅಭ್ಯರ್ಥಿ ಆಯ್ಕೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಲ್ ಸಿಂಗ್ ಖೈರಾ, ಕೇಜ್ರಿವಾಲ್ ರಾಜ್ಯಸಭೆಗೆ ಪ್ರವೇಶಿಸುವುದು ಖಚಿತ ಎಂದಿದ್ದಾರೆ.
ಇನ್ನು, ‘ಅರೋರಾ ಅವರ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ಅಥವಾ ಮನೀಶ್ ಸಿಸೋಡಿಯಾ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ’ ಎಂದು ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಹೇಳಿದ್ದಾರೆ.
ಏನತ್ಮಧ್ಯೆ, ಕೇಜ್ರಿವಾಲ್ ರಾಜ್ಯಸಭಾ ಪ್ರವೇಶದ ಕುರಿತು ವಿರೋಧ ಪಕ್ಷಗಳ ಹೇಳಿಕೆಯನ್ನು ಪಂಜಾಬ್‌ನ ಎಎಪಿ ವಕ್ತಾರ ನೀಲ್ ಗರ್ಗ್ ತಳ್ಳಿಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.