ADVERTISEMENT

ದೆಹಲಿ ವಿಧಾನಸಭಾ ಚುನಾವಣೆ: ಕೇಜ್ರಿವಾಲ್ ನವದೆಹಲಿ, ಅತಿಶಿ ಕಲ್ಕಾಜಿಯಿಂದ ಸ್ಪರ್ಧೆ

ಪಿಟಿಐ
Published 15 ಡಿಸೆಂಬರ್ 2024, 9:38 IST
Last Updated 15 ಡಿಸೆಂಬರ್ 2024, 9:38 IST
   

ನವದೆಹಲಿ: ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಕೊನೆಯ ‍ಪಟ್ಟಿಯನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದೆ. ಅರವಿಂದ ಕೇಜ್ರಿವಾಲ್‌ ಅವರು ನವದೆಹಲಿ ಕ್ಷೇತ್ರದಿಂದ ಹಾಗೂ ಮುಖ್ಯಮಂತ್ರಿ ಅತಿಶಿ ಅವರು ಕಲ್ಕಾಜಿಯಿಂದ ಸ್ಪರ್ಧೆ ಮಾಡಲಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ತನ್ನದೇ ಆದ ಕ್ಷೇತ್ರಗಳಿಂದ ತನ್ನ ಹಿರಿಯ ನಾಯಕರನ್ನು ಕಣಕ್ಕೆ ಇಳಿಸಿದೆ.

ಸಚಿವರಾದ ಸೌರಭ್ ಭಾರದ್ವಾಜ್, ಗೋಪಾಲ್ ರೈ, ಇಮ್ರಾನ್ ಹುಸೇನ್, ರಘುವಿಂದರ್ ಶೋಕೀನ್ ಮತ್ತು ಮುಖೇಶ್ ಕುಮಾರ್ ಅಹ್ಲಾವತ್ ಅವರು ಕ್ರಮವಾಗಿ ಗ್ರೇಟರ್ ಕೈಲಾಶ್, ಬಾಬರ್‌ಪುರ್, ಬಲ್ಲಿಮಾರನ್, ನಂಗ್ಲೋಯ್ ಜಾಟ್ ಮತ್ತು ಸುಲ್ತಾನ್‌ಪುರ್ ಮಜ್ರಾದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ADVERTISEMENT

2020ರ ದೆಹಲಿ ಚುನಾವಣೆಯಲ್ಲಿ, ಎಎಪಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.