ADVERTISEMENT

ಬಿಜೆಪಿಯು ಬಂಗಾಳಿ ವಿರೋಧಿ ಪಕ್ಷ: ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ

ಪಿಟಿಐ
Published 21 ಜುಲೈ 2025, 13:31 IST
Last Updated 21 ಜುಲೈ 2025, 13:31 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ   

ಕೋಲ್ಕತ್ತ: ‘ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಕಿತ್ತೆಸೆಯುತ್ತೇವೆ. ಬಂಗಾಳಿ ಭಾಷೆ ಮಾತನಾಡುವ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲು ಬಿಜೆಪಿ ಬಯಸುತ್ತಿದ್ದೆ. 2026ರ ವಿಧಾನಸಭೆ ಚುನಾವಣೆ ಬಳಿಕ ನಾವೇ ಅದನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸುತ್ತೇವೆ. ಇದೊಂದು ಬಂಗಾಳಿ ವಿರೋಧಿ ಪಕ್ಷ’ ಎಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಹೇಳಿದರು.

ಟಿಎಂಸಿ ಸೋಮವಾರ ಆಯೋಜಿಸಿದ್ದ ‘ಹುತಾತ್ಮರ ದಿನ’ ರ್‍ಯಾಲಿಯಲ್ಲಿ ಅವರು ಮಾತನಾಡಿ, ‘ತಮ್ಮ ಮಾತೃಭಾಷೆಯನ್ನು ಮಾತನಾಡುವ ಬಂಗಾಳದ ಜನರನ್ನು ಬಿಜೆಪಿಯು ಪದೇ ಪದೇ ಗುರಿಯಾಗಿಸುತ್ತಲೇ ಇದೆ. ಬಂಗಾಳಿ ಭಾಷೆ ಮೇಲೆ ದಾಳಿ ನಡೆಸುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರ ನಿಜ ಬಣ್ಣ ಇದರಲ್ಲಿಯೇ ಗೊತ್ತಾಗುತ್ತದೆ’ ಎಂದರು.

‘ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ನಮ್ಮ ಪಕ್ಷದ ಸಂಸದರು ಅಗತ್ಯ ಬಿದ್ದರೆ ಬಂಗಾಳಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ನಮ್ಮ ಧ್ವನಿಯನ್ನು ಅಡಗಿಸುವ ಧೈರ್ಯ ಮಾಡಲಿ ನೋಡೋಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು 77 ಸ್ಥಾನ ಗಳಿಸಿದ್ದರು. ಮುಂದಿನ ಬಾರಿ ಅವರನ್ನು 50 ಸ್ಥಾನಕ್ಕೆ ತಳ್ಳುತ್ತೇವೆ’ ಎಂದು ಸವಾಲು ಹಾಕಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.