ADVERTISEMENT

ಅಹಮದಾಬಾದ್‌ನಲ್ಲಿ ಎಬಿವಿಪಿ- ಎನ್‌ಎಸ್‌ಯುಐ ಸಂಘರ್ಷ; 10 ಮಂದಿಗೆ ಗಾಯ

ಏಜೆನ್ಸೀಸ್
Published 7 ಜನವರಿ 2020, 9:55 IST
Last Updated 7 ಜನವರಿ 2020, 9:55 IST
ಎಬಿವಿಪಿ- ಎನ್‌ಎಸ್‌ಯುಐ ಸಂಘರ್ಷ (ಕೃಪೆ: ಟ್ವಿಟರ್)
ಎಬಿವಿಪಿ- ಎನ್‌ಎಸ್‌ಯುಐ ಸಂಘರ್ಷ (ಕೃಪೆ: ಟ್ವಿಟರ್)   

ಅಹಮದಾಬಾದ್: ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಖಂಡಿಸಿ ಅಹಮದಾಬಾದ್‌ನಲ್ಲಿರುವಎಬಿವಿಪಿ ಕಚೇರಿ ಸಮೀಪಎನ್‌ಎಸ್‌ಯುಐ ಪ್ರತಿಭಟನೆ ನಡೆಸಿದ್ದು ಈ ವೇಳೆ ಎಬಿವಿಪಿ- ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಸಂಘರ್ಷವುಂಟಾಗಿದೆ. ಈ ಗಲಭೆಯಲ್ಲಿ10 ಮಂದಿಗೆ ಗಾಯಗಳಾಗಿದ್ದು, ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ಎಬಿವಿಪಿ ಕಾರ್ಯಕರ್ತರುಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿದ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ಇದು ಬಿಜೆಪಿಯ ದಬ್ಬಾಳಿಕೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ನಿಜವಾದ ಮುಖ ಈಗ ಕಾಣಿಸುತ್ತಿದೆ. ಸರ್ಕಾರ ಸಂವಿಧಾನಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದು, ದಬ್ಬಾಳಿಕೆ ವಿರುದ್ಧ ನಾವು ಜತೆಯಾಗಿ ನಿಲ್ಲಬೇಕು ಎಂದಿದ್ದಾರೆ ನೀರಜ್.

ADVERTISEMENT

ಎಬಿವಿಪಿ ಗೂಂಡಾಗಳು ನಡೆಸಿದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಅಮಾಯಕ ವಿದ್ಯಾರ್ಥಿಗಳ ಮೇಲೆ ಗಂಭೀರ ಹಲ್ಲೆ ನಡೆಯುವಾಗಲೂ ಬಿಜೆಪಿ ಸುಮ್ಮನಿರುತ್ತದೆ. ಅವರು ಭಾರತವನ್ನು ಯುದ್ಧಭೂಮಿಯನ್ನಾಗಿ ಮಾಡಿದ್ದಾರೆ ಎಂದುಕಾಂಗ್ರೆಸ್ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.